#throwback
ಮಳೆಹನಿಗಳಷ್ಟೇ ಸಾಕ್ಷಿಯಾಗಿದ್ದ ಕ್ಷಣಗಳವು. ಬೀಸಿದ ಗಾಳಿಗೆ ಅವಳ ಕಣ್ಣಿಗೆ ಅಡ್ಡ ಬಂದಮುಂಗುರುಳನ್ನು ಸರಿಸುತ್ತ, ಅವಳು ನನ್ನತ್ತ ನೋಡುವಾಗಲೆಲ್ಲ ಎದೆಯೊಳಗೆ ಯಾರೋ ಸಹಿ ಮಾಡಿದಂತಾಗುತ್ತಿತ್ತು. ಅವಳ ತುಟಿಗಳು ನನಗೆ ಏನೋ ಹೇಳಲು ಆತುರಿಸುತ್ತಿದ್ದವು ಎನ್ನುಸುತ್ತಿತ್ತು ಆದರೆ ಅವಳು ಮಾತ್ರ ಮೌನದ ಮಾತಾಗಿದ್ದಳು. ಅವಳು ನನ್ನ ಪ್ರೀತಿಯನ್ನು ಒಪ್ಪುವಳೇ ? ಅಥವಾ ಇರುವ ಸ್ನೇಹವನ್ನೂ ತ್ಯಜಿಸಿ ನನ್ನಿಂದ ದೂರವಾಗುವಳೋ ಎಂಬ ಭಯ ನನಗೆ ಕಾಡುತ್ತಿತ್ತು.ಕಳೆದ ಹತ್ತು ನಿಮಿಷಗಳ ಕಾಲ ನಮ್ಮ ಕಣ್ಣುಗಳಷ್ಟೇ ಮಾತಾಡಿದ್ದವು.
ಕೊನೆಗೂ ಏನೋ ಹೇಳಲು ಹತ್ತಿರ ಬಂದಳು. ಅವಳ ಕಣ್ಣುಗಳಷ್ಟೇ ನಾನು ನೋಡುತಲಿದ್ದೆ.
ಅವಳ ಹೃದಯದ ಬಡಿತ ನನಗೂ ಕೆಳುವಂತಿತ್ತು. ಕೊನೆಗೂ ಮೌನ ಮುರಿದು ನನ್ನ ಕೈಬೆರಳುಗಳನ್ನು ಬಿಗಿ ಹಿಡಿದು
ಗದ್ಗತಿತಳಾಗಿ ‘ಐ ಲವ್ ಯೂ ‘ಎಂದೂ ಹೇಳಿಯೇ ಬಿಟ್ಟಳು!
ನದಿಗಳು ಸಮುದ್ರ ಸೇರಿದಂತೆ ,ಮೊಗ್ಗು ಹೂವಾಗಿ ಜೇನಾದಂತೆ, ಇರುಳಿಗೆ ಬೆಳದಿಂಗಳು ಜೊತೆಯದಂತೆ ನನ್ನ ಹೃದಯ ಸಂಭ್ರಮಿಸಿತ್ತು!
ಆ ಕ್ಷಣಗಳು ಇನ್ನು ಬಾಕಿಇವೆ….
‘ನದಿಗಳು ಸಮುದ್ರ ಸೇರಿದಂತೆ ,ಮೊಗ್ಗು ಹೂವಾಗಿ ಜೇನಾದಂತೆ, ಇರುಳಿಗೆ ಬೆಳದಿಂಗಳು ಜೊತೆಯಾದಂತೆ …’ ಪ್ರೇಮದ ಮಾಧುರ್ಯ ಕವಿಯ ಲೇಖನಿಯಲ್ಲಿ ಸಂಭ್ರಮಿಸಿಬಿಡುವ ವಾಕ್ಯಗಳು!