ಮಳೆಯಲಿ ಕೊಡೆ ಹಿಡಿದು..
ಮಳೆಯಲಿ ಕೊಡೆ ಹಿಡಿದು
ಹೊರಟವಳ ಜಡೆ ಕಂಡು
ಮನದ ಮುಗಿಲಲ್ಲಿ ಮುಂಗಾರು ಮಳೆ
ಹಸಿಯಾದ ನೆಲಕೆ ಬೀಳದಂತೆ
ಮೈತಬ್ಬಿದ ದುಪ್ಪಟ ಜಾರದಂತೆ
ಕೊಡೆ ಬಿಗಿ ಹಿಡಿದು
ಆಗೊಮ್ಮೆ ಇಗೊಮ್ಮೆ ಜಿಗಿದು
ತನ್ನ ಕಾಲ್ಗೆಜ್ಜೆ ಸದ್ದು ಮಾಡುವಾಗ
ಮಳೆ ಹನಿಗಳೂ ಅದರ ತಾಳಕ್ಕೆ ಕುಣಿದವು
ಅವಳಿಗೆ ಗೊತ್ತಾಗದಂತೆ ಅವಳ
ಪಾದ ತೊಳೆದವು!