ಮನಸಿನ ಮನವಿಯ ನೀ ಕೇಳು..
ಕನಸಿನ ಮಳೆಯಲಿ ನೆನೆದ
ಮನಸಿನ ಮನವಿಯ ನೀ ಕೇಳು..
ಕಡಲಿನ ತೀರದಿ ಕೈಹಿಡಿದು
ತುಸುದೂರ ನಡೆಯೋಣವೇ ನೀ ಹೇಳು..
ಕನಸಿನ ಕದ ನೀನೇ ತೆರೆದೆ
ಹೃದಯದ ಮೇಲೆ ನೀನೇನು ಬರೆದೆ
ನೂತನ ಲೋಕಕೆ ಹಾರಿ ಹೋಗೋಣವೆ ನೀ ಹೇಳು ..
ದಿನವೂ ಒಂದೇ ಕನಸು ಬೀಳುತಿದೆ
ಹೃದಯ ಒಂದೇ ಹಾಡು ಹಾಡುತಿದೆ
ಕೂಗಿ ಹೇಳುವೆ ನೀ ನನ್ನ ದೇವತೆ
ನೀನೊಮ್ಮೆ ಓದು ನಾ ಬರೆದ ಕವಿತೆ..
ಮಳೆಹನಿಗಳು ಹೊಸ ಹಾಡು ಬರೆದಿವೆ
ಎಲ್ಲ ದಾರಿಗಳು ನಿನ್ನನ್ನೇ ಸೇರಿವೆ
ಕೂಗಿ ಹೇಳುವೆ ನೀ ನನ್ನ ದೇವತೆ
ನಿನೋದು ಮಳೆಹನಿಗಳ ಗೀತೆ …