Month: December 2016

ಬರೀ ಫ್ರೆಂಚ್ ಮಾತಾಡೋ ದೇಶದಲ್ಲಿ ಕೂತು ಬರೆದ ಒಂದಷ್ಟು ಹನಿಗಳು

ಕನಸಿನಲ್ಲಿ ನೀನು ಬಂದಂತೆ..
ಕಣ್ಣಿನಲ್ಲೇ ನನ್ನ ಕರೆದಂತೆ
ಕಿವಿಯಲೇನೋ ಪಿಸಿನುಡಿದಂತೆ
ನಗುವೆಯೇಕೆ ಏನು ತಿಳಿಯದಂತೆ..

ನಿನ್ನ ಕೈ ಹಿಡಿದು
ಒಂದೆರಡು ಕವನ ನುಡಿದು
ಅಪ್ಪುಗೆಯ ಬಯಸುವೆನು
ನೀನು ಒಪ್ಪಿದರೆ..
ನಿನ್ನ ಬೆರಳ ಹಿಡಿದು
ಬರೆಯುವೆನು ಎದೆಯಮೇಲೆ
ನನ್ನೆಲ್ಲ ಭಾವನೆಗಳ ಸುರಿದು
ತಿದ್ದಿ ಬಿಡು ನಾ ತಪ್ಪಿದರೆ..
ಅಪ್ಪಿ ಬಿಡು ನೀ ಒಪ್ಪಿದರೆ..

ಚಳಿಯು ಮೈಗೆ ಕಚಗುಳಿ ಕೊಟ್ಟಂತೆ
ಮಳೆಯೂ ಬಂದು ಮನ ನೆನದಂತೆ
ಕಂಡ ಕನಸು ನನಸಾದಂತೆ
ನಿನ್ನನು ನೋಡಿದರೆ….

ಫ್ರಾನ್ಸ್ ಚಳಿ !

ಎಷ್ಟೇ ಚಳಿ ಇರಲಿ
ನಿನ್ನ ನೆನಪೊಂದೆ ಸಾಕು ನನ್ನ ಮತ್ತು ನನ್ನ ಹೃದಯ ಬೆಚ್ಚವಾಗಿರಲು….