ಕನಸಿನಲ್ಲಿ ನೀನು ಬಂದಂತೆ..
ಕಣ್ಣಿನಲ್ಲೇ ನನ್ನ ಕರೆದಂತೆ
ಕಿವಿಯಲೇನೋ ಪಿಸಿನುಡಿದಂತೆ
ನಗುವೆಯೇಕೆ ಏನು ತಿಳಿಯದಂತೆ..
ನಿನ್ನ ಕೈ ಹಿಡಿದು
ಒಂದೆರಡು ಕವನ ನುಡಿದು
ಅಪ್ಪುಗೆಯ ಬಯಸುವೆನು
ನೀನು ಒಪ್ಪಿದರೆ..
ನಿನ್ನ ಬೆರಳ ಹಿಡಿದು
ಬರೆಯುವೆನು ಎದೆಯಮೇಲೆ
ನನ್ನೆಲ್ಲ ಭಾವನೆಗಳ ಸುರಿದು
ತಿದ್ದಿ ಬಿಡು ನಾ ತಪ್ಪಿದರೆ..
ಅಪ್ಪಿ ಬಿಡು ನೀ ಒಪ್ಪಿದರೆ..
ಚಳಿಯು ಮೈಗೆ ಕಚಗುಳಿ ಕೊಟ್ಟಂತೆ
ಮಳೆಯೂ ಬಂದು ಮನ ನೆನದಂತೆ
ಕಂಡ ಕನಸು ನನಸಾದಂತೆ
ನಿನ್ನನು ನೋಡಿದರೆ….
ದೇಶ ಯಾವುದಾದರೂ ಪ್ರೇಮ ಭಾಷೆ ಒಂದೆ!