ಶುದ್ಧವಾಗಲಿ ಮನಸು
ಬುದ್ಧನ ನಗುವಿನಂತೆ
ಭವ್ಯವಾಗಲಿ ಬದುಕು
ಶುದ್ಧ ಬೆಳದಿಂಗಳಂತೆ!
ಬುದ್ದಿ ಒಸಿ ಮಾಡ್ಕೊಳ್ಳಿ ಬುದ್ಧಿ ಶುದ್ಧಿ
ಹೆಣ್ಣು ಒಂದು ತಾಯಿಯ ರೂಪ
ಏಕೆ ಅವಳಿಗೆ ದೌರ್ಜನ್ಯದ ಶಾಪ
ದೇವರ ಇನ್ನೊಂದು ರೂಪವೇ ಹೆಣ್ಣು
ಇನ್ನಾದರೂ ಬದಲಿಸಿ ನಿಮ್ಮ ಕೆಟ್ಟ ಕಣ್ಣು !
ಬುದ್ದಿ ಒಸಿ ಮಾಡ್ಕೊಳ್ಳಿ ಬುದ್ಧಿ ಶುದ್ಧಿ
ಸಹನೆಗೆ ಹೆಣ್ಣೇ ವಿಶ್ವರೂಪ
ತ್ಯಾಗಕೆ ಅವಳೇ ಪ್ರತಿರೂಪ
ಮನ್ನಾವಾಗದಿರಲಿ ಅವಳಮೇಲಾದ ಪಾಪ
ಹೆಣ್ಣೇ ! ತೋರಿಸುಬಿಡು ಅಗ್ನಿಯಂತ ಕೋಪ
ಅಗ್ನಿಯಂತ ಕೋಪ!
ಶುದ್ಧವಾಗಲಿ ಮನಸು
ಬುದ್ಧನ ನಗುವಿನಂತೆ
ಭವ್ಯವಾಗಲಿ ಬದುಕು
ಶುದ್ಧ ಬೆಳದಿಂಗಳಂತೆ!