ಏಕೆ ಬೇಜಾರು ನಿನಗೆಂದೇ
ಬರೆಯುವೆ ಮೊತ್ತೊಂದು ಸಾಲು..
ಸಾವಿರ ನನ್ನ ಕವಿತೆಗಿಂತ
ನಿನ್ನ ಮುದ್ದು ಮೌನವೇ ಎಲ್ಲಕಿಂತ ಮಿಗಿಲು.. ನನ್ನೆದೆಯ ಮುಗಿಲು..
ಕನಸಿನ ಮನೆಗೆ ಬಾಗಿಲು..
ಇರಲಿ ಆ ತುಂಟು ಕೋಪ ಎಂದಿಗೂ ನನ್ನೊಂದಿಗೆ ಹೀಗೆ
ಪ್ರತಿಕ್ಷಣವೂ ನನ್ನದೆಯಲಿ ಮೂಡುತಿರುವ ನಿನ್ನ ದಿವ್ಯ ಮೊಗದ ಹಾಗೆ
ಬೇರೇನು ಬೇಕು ನನಗೆ ಸ್ನೇಹ ನದಿಯ ಬಿಟ್ಟು
ನಿನಾದರೆ ಕಡಲು, ತೀರವೇ ನನ್ನ ಹೃದಯ
ಅಪ್ಪಿಕೋ ನನ್ನನು, ಅಲೆಯು ತೀರವನ್ನು ಅಪ್ಪಳಿಸುವಂತೆ
Reblogged this on ಭಾವಶರಧಿ.