Day: March 16, 2017

ದಯವಿಟ್ಟು ಗಮನಿಸಿ #throwbackpost

ಟೈಟಲ್ ಅಲ್ಲೇ ಎಲ್ಲರ ಗಮನ ಸೆಳೆದ ‘ದಯವಿಟ್ಟು ಗಮನಿಸಿ’ ಚಿತ್ರದ ಮೂಹೂರ್ತ ಕಳೆದ ಭಾನುವಾರ ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದಲ್ಲಿ ಇತ್ತು. ಇರುವೆ ತಂಡ ಈ ಸಿನೆಮಾಗೆ ಮರ್ಚೆನ್‌ಡೈಸ್ ಪಾರ್ಟ್ನರ್ ಆಗಿರುವದರಿಂದ ಚಿತ್ರದ ಡೈರೆಕ್ಟರ್ ರೋಹಿತ್ ಪದಕಿ ಅವರು ನಮ್ಮನ್ನ ಆಹ್ವಾನಿಸಿದ್ದರು

‘ನಮ್ಮನ್ನೂ ಗಮನಿಸಿ’ ಅನ್ನೋತರ ಇರುವೆ ತಂಡದ ಸಂಸ್ಥಾಪಕ ಕೃಷ್ಣಕಾಂತ್ ಹಾಗೂ ಸಂಪಾದಕೀಯ ವಿಭಾಗದಿಂದ ನಾನು (ವಿನಯ್) ಇರುವೆ ಟೀ -ಶರ್ಟ್ ಹಾಕೊಂಡು ಭಾನುವಾರ ಬೆಳ್ಬೆಳಿಗ್ಗೆ ಬಸವನಗುಡಿ ದೊಡ್ದಗಣೇಶ ಟೆಂಪಲ್ ಗೆ ಟಿಫಿನ್ ಮಾಡ್ದೆ ಹೋಗಿದ್ವಿ.

ಚಿತ್ರಕ್ಕೆ ದುಡ್ಡು ಹಾಕಿದ ಯಂಗ್ ಪ್ರೊಡ್ಯೂಸರ್ ಕೃಷ್ಣ ಸಾರ್ಥಕ್ ,ಮ್ಯೂಸಿಕ್ ಡೈರೆಕ್ಟರ್ ಅನೂಪ್ ಸೀಳಿನ್, ನಿರ್ದೇಶಕ ರೋಹಿತ್ ಅವರು ಇದ್ರು. ನಾವ್ ಏನ್ ಮಾಡ್ಬಹುದು ಅನ್ನೋ ಬಗ್ಗೆ ಒಂದು ಚಿಕ್ಕ ಡಿಸ್ಕಷನ್ ಮಾಡಿದ್ವಿ. ಅಷ್ಟೊತ್ತಿಗೆ ಸಿನೆಮಾದಲ್ಲಿ ಆಕ್ಟ್ ಮಾಡುವ ವಶಿಷ್ಠ, ಸಂಗೀತ ಭಟ್ ,ರಾಜೇಶ್ ನಟರಂಗ್, ಪೂರ್ಣಚಂದ್ರ ಎಲ್ಲರೂ ಬಂದ್ರು. ಇನ್ನು ಅತಿಥಿಗಳಾಗಿ ಪವನ್ ವಡೆಯರ್, ವಿಜಯ್ ಪ್ರಸಾದ್,ನವೀನ್ ಸಾಗರ್ ಹಾಜರಾದ್ರು.
ದೊಡ್ದಗಣೇಶನಿಗೆ ಪೂಜೆ ಮಾಡಿ ಕ್ಯಾಮೆರಾಗೂ ಪೂಜೆ ಮಾಡಿ ದೇವರ ಸನ್ನಿಧಿಯಲ್ಲೇ first shot ತಗೆದ್ರು dop ಅರವಿಂದ್ ಕಶ್ಯಪ್.

ಎಲ್ಲರಿಗೂ ಹೊಟ್ಟೆ ಹಸಿದಿದ್ದ ಕಾರಣ ಬೇಗನೇ ಮೂಹೂರ್ತ ಮುಗಿತು ಅನ್ಸುತ್ತೆ. ಟಿಫಿನ್ಗೆ ಪ್ರೊಡ್ಯೂಸರ್ ಖಾರ ಕಮ್ಮಿ ಹಾಕಿಸಿ ಉಪ್ಪಿಟ್ಟು,ಜಾಸ್ತಿ ದ್ರಾಕ್ಷಿ ,ಗೋಡಂಬಿ ಹಾಕಿಸಿ ಕೇಸರಿಬಾತ್ ಮಾಡಿಸಿದ್ರು. ಚಿತ್ರ ಪ್ರಾರಂಭದ ಖುಷಿಗೋ, ಹೊಟ್ಟೆ ಹಸಿವಿಗೋ ಎಲ್ಲರೂ ಎರೆಡೆರಡು ಸಲ ಬ್ಯಾಟಿಂಗ್ ಮಾಡಿದ್ರು.
ಎಲ್ಲರ್ ಬಾಯಲ್ಲೂ ಒಂದೇ ಮಾತು.. ಕೇಸರಿಬಾತ್ Top Class.. ಆಹಾ! ಆ ಕೇಸರಿಬಾತ್ ಬಗ್ಗೆನೇ ಎರಡು ಅಂಕಣ ಬರೀಬಹುದು!
ತಿಂಡಿ ಮುಗಿಸಿದ ಬಳಿಕ ನಾವು ಗಮನಿಸಿದ್ದು.. ತಡವಾಗಿ ಬಂದ ಪ್ರಕಾಶ ಬೆಳವಾಡಿ ಅವರಿಗೆ ಚೌಚೌ ಬಾತ್ ಜಸ್ಟ್ ಮಿಸ್ ಆಗಿದೆ ಅಂತ!
ಹೀಗಿತ್ತು ಈ ಚಿತ್ರದ ಮುಹೂರ್ತ..ನಾವು ಚಿತ್ರ ತಂಡ ಹಾಗೂ ಅತಿಥಿಗಳೊಂದಿಗೆ ಒಂದು ಸೆಲ್ಫಿ ತಗೊಂಡು ಖುಷ್ ಖುಷಿಯಾಗಿ ಮನೆಗ್ ಬಂದ್ವಿ.