ಕಿವಿಯಲ್ಲಿ ಯಾವಾಗಲೂ earphone ಹಾಕಿಕೊಂಡು
ಗಾಡಿ ಓಡಿಸುತ್ತಿದ್ದವನಿಗೆ
ಅದೇ ದಾರಿಯಲ್ಲಿ ಅಪಘಾತಕ್ಕೀಡಾದ ಅವನ ಮಗಳ ಕೂಗು
ಅವನಿಗೆ ಕೇಳಲೇ ಇಲ್ಲ.!
ದುಡ್ಡಿಗಾಗಿ ಅಪ್ಪ ದುಬೈನಲ್ಲಿ ಕಾರ್ಮಿಕನಾಗಿ ಕೆಲಸಮಾಡುತ್ತಿದ್ದ
ಬ್ರೆಡ್ಡಿಗಾಗಿ ಮಗಳು ಪುಟ್ಟ ಅಂಗಡಿ ಮುಂದೆ ಮಾರ್ಮಿಕವಾಗಿ ನಿಂತಿದ್ದಳು.
ಕಂಠ ಪೂರ್ತಿ ಕುಡಿದು waiterಗೆ
೨೦೦ ರೂ ಟಿಪ್ಸ್ ಕೊಡುವ ಕುಡುಕನ ಹೆಂಡತಿಗೆ
ಎರಡು ವರುಷದಿಂದ ತಾನು ಕೇಳುತಿದ್ದ
೨೦೦ರೂ ಸೀರೆಯೂ ದಕ್ಕಿಲ್ಲ !!