ಅಂಕಣಗಳು

ನಾನು ಬರೆದ ಒಂದಿಷ್ಟು ಅಂಕಣಗಳು..

ಮುಂಜಾನೆಯ ತಿಳಿ ಸಲ್ಲಾಪಗಳು – ನಂದಿ ಬೆಟ್ಟದಲ್ಲಿ ಕಂಡಿದ್ದು !

ನಿದ್ದೆ ಗೆಟ್ಟಿರುವ ಕಣ್ಣುಗಳು ಸುತ್ತಲೂ ಹಾಲಿನ ಕೆನೆಯಂತೆ ಹರಡಿಕೊಂಡಿರುವ
ಮುಂಜಾನೆ ಮಂಜಿನೊಳಗೆ ತೂರಿಕೊಂಡು ಬರಲಿರುವ ಸೂರ್ಯನ ಕಿರಣಗಳನ್ನೇ ಕಾಯುತ್ತಿವೆ!.

ಆ ಸಿಹಿ ತಂಗಾಳಿಗೆ ನಡುಗುವ ಮೈಮನಗಳು ಒಬ್ಬರೊಬ್ಬರನ್ನು ಅಪ್ಪಿಕೊಂಡು ಜೊತೆಗೆ ತಂದಿದ್ದ ಶಾಲಿಗಿಂತ ಹೆಚ್ಚು ಬೆಚ್ಚನೆಯ ಭಾವಕ್ಕೆ ತೃಪ್ತಗೊಂಡಿವೆ.
ಸೆಲ್ಫಿಗೆಂದೇ ಖರೀದಿ ಮಾಡಿದ ಮೊಬೈಲುಗಳಲ್ಲಿ ಹೊಸ ಹೊಸ ಪೋಸುಗಳದ್ದೇ ಸದ್ದು..! EMI ನಲ್ಲಿ ತಂದ  ಹೈ ಎಂಡ್ ಕ್ಯಾಮೆರಾಗಳಲ್ಲಿ ಸೂರ್ಯನ ಉದಯದ ಮಜಲುಗಳು ದಾಖಲಾಗಿವೆ. ಒಂದು ತಾಸಿನಿಂದ ಅದೇ ಜಾಗದಲ್ಲಿ ಕಾದು ಕ್ಲಿಕಿಸಿದ ಒಂದು ಫೋಟೋಗೆ ಕ್ಯಾಮರಾಮ್ಯಾನ್ ಖುಷಿಪಟ್ಟು ಅಲ್ಲಿಂದ ನಿರ್ಗಮಿಸುತ್ತಿದ್ದಾನೆ

ಅಪ್ಪನ ಕೈಯಲ್ಲಿದ್ದ ಹೊಸ ಆಟಿಕೆ ಕದ್ದು ಮಗು ಓಡತೊಡಗಿದೆ.
ಅಮ್ಮನಿಗೆ ಅವನು ಎಲ್ಲಿ ಬೀಳುತ್ತಾನೋ ಅನ್ನೋವುದೇ ಚಿಂತೆ. ಮಗ ಓಡುವುದನ್ನು ಕಲಿತ ಖುಷಿ ಅಪ್ಪನ ಮೊಗದಲ್ಲಿ ಕಾಣುತ್ತಿದೆ. ಸ್ವರ್ಗವೇ ಆ ಆಟಿಕೆಯಲ್ಲಿ ಸಿಕ್ಕಂತೆ ಮಗು ಅದನ್ನು ಯಾರಿಗೂ ಕೊಡಲೂ ಒಪ್ಪದೇ ಆ ದೊಡ್ಡ ಪಾರ್ಕಿನಲ್ಲಿ ತನ್ನ ಸಣ್ಣ ಸಣ್ಣ ಮೊದಲ ಹೆಜ್ಜೆ ಇಡುತ್ತಿದೆ.
ಮರದ ಮರೆಯಲ್ಲಿ ಬರಿ ಕನಸಿನಲ್ಲೇ ಕಾಣುತ್ತಿದ್ದ ಪ್ರೇಮ ಸಲ್ಲಾಪಗಳು ಅಲ್ಲಿ ನನಸಾಗುತ್ತಿವೆ.
ಯಾರಾದರೂ ನೋಡಿದರೆ ಏನು ಗತಿ ಎಂಬ ಭಯಕ್ಕಿಂತ ನೋಡಿದರೆ ನೋಡಲಿಬಿಡು
ಎನ್ನುವ ಸಣ್ಣ ನಾಚಿಕೆಯ ಜೊತೆಜೊತೆಗೆ ಒಂದು ಹುಂಬುತನವಿದೆ.

ಜೋತುಬಿದ್ದ ಹೊಟ್ಟೆಯನ್ನು ಮತ್ತೆ ಬೆನ್ನಿಗೆ ಅಂಟಿಸಲು ಒಂದಿಷ್ಟು ಯುವಕ ಯುವಕಿಯರು ಏದುಸಿರಿನಲ್ಲಿ ಓಡುತ್ತಿದ್ದಾರೆ. ಅಷ್ಟೊತ್ತು ಓದಿ ಹರಿಸಿದ್ದು ಬೆವರೋ ಅಥವಾ ಮಂಜಿನ ಹನಿಯೊ ಎಂಬ ಸಣ್ಣ ಅನುಮಾನದೊಂದಿಗೆ ಮತ್ತೆ ಓಡುತ್ತಿದ್ದಾರೆ. ಬಲಗೈಗೆ ಕಟ್ಟಿದ ಸ್ಮಾರ್ಟ್ ವಾಚ್ ಅವರು ಓಡಿದ ಹೆಜ್ಜೆಗಳನ್ನು ಬೆವರಿಲ್ಲದೇ ಎಣಿಸುತ್ತಿದೆ.

ಮೊಮ್ಮಕ್ಕಳ ಒತ್ತಾಯಕ್ಕೆ ಮಣಿದು ಬಂದಿದ್ದ ಅಜ್ಜಿ ಬೆಟ್ಟ ಹತ್ತಲಾಗದೇ ಮೊಮ್ಮಗನ
ಕೈಯಿಡಿದು ಕೂತಿದ್ದಾಳೆ. “ಕಾಮನ್ ಅಜ್ಜಿ..! ಕಾಮನ್ ..!”ಎಂದು ಏಳು ವರ್ಷದ ಮೊಮ್ಮಗಳು ಒಂದೇ ಸಮನೇ ಕೂಗುತ್ತಿದ್ದಾಳೆ. ಮಗಳನ್ನು ಸುಮ್ಮನಿರಲು ಸನ್ನೆ ಮಾಡುತ್ತಲೇ ಊದಿಕೊಂಡಿದ್ದ ಅಮ್ಮನ ಕಾಲನ್ನು ಮಗ ಒತ್ತುತ್ತಿದ್ದಾನೆ..

ಒಂದು ಸುಂದರ ಮುಂಜಾನೆಯ ಸಲ್ಲಾಪವನ್ನು ಕಣ್ಣಿಗೆ ಕಟ್ಟಿಕೊಂಡು, ಆಗ ತಾನೇ ಗ್ರೀನ್ ಸಿಗ್ನಲ್ ಬಿಟ್ಟಾಗ ಎಲ್ಲ ಗಾಡಿಗಳಿಂದ ಸೇರಿ ಉದಯಿಸುವ ಕಪ್ಪು ಮೋಡವನ್ನು ತೂರಿಕೊಂಡು
ನಮ್ಮ ಗಾಡಿ ಮುಂದುವರೆಯುತ್ತಿದೆ !

 

 

 

 

 

ದಯವಿಟ್ಟು ಗಮನಿಸಿ #throwbackpost

ಟೈಟಲ್ ಅಲ್ಲೇ ಎಲ್ಲರ ಗಮನ ಸೆಳೆದ ‘ದಯವಿಟ್ಟು ಗಮನಿಸಿ’ ಚಿತ್ರದ ಮೂಹೂರ್ತ ಕಳೆದ ಭಾನುವಾರ ಬಸವನಗುಡಿಯ ದೊಡ್ಡ ಗಣೇಶ ದೇವಸ್ಥಾನದಲ್ಲಿ ಇತ್ತು. ಇರುವೆ ತಂಡ ಈ ಸಿನೆಮಾಗೆ ಮರ್ಚೆನ್‌ಡೈಸ್ ಪಾರ್ಟ್ನರ್ ಆಗಿರುವದರಿಂದ ಚಿತ್ರದ ಡೈರೆಕ್ಟರ್ ರೋಹಿತ್ ಪದಕಿ ಅವರು ನಮ್ಮನ್ನ ಆಹ್ವಾನಿಸಿದ್ದರು

‘ನಮ್ಮನ್ನೂ ಗಮನಿಸಿ’ ಅನ್ನೋತರ ಇರುವೆ ತಂಡದ ಸಂಸ್ಥಾಪಕ ಕೃಷ್ಣಕಾಂತ್ ಹಾಗೂ ಸಂಪಾದಕೀಯ ವಿಭಾಗದಿಂದ ನಾನು (ವಿನಯ್) ಇರುವೆ ಟೀ -ಶರ್ಟ್ ಹಾಕೊಂಡು ಭಾನುವಾರ ಬೆಳ್ಬೆಳಿಗ್ಗೆ ಬಸವನಗುಡಿ ದೊಡ್ದಗಣೇಶ ಟೆಂಪಲ್ ಗೆ ಟಿಫಿನ್ ಮಾಡ್ದೆ ಹೋಗಿದ್ವಿ.

ಚಿತ್ರಕ್ಕೆ ದುಡ್ಡು ಹಾಕಿದ ಯಂಗ್ ಪ್ರೊಡ್ಯೂಸರ್ ಕೃಷ್ಣ ಸಾರ್ಥಕ್ ,ಮ್ಯೂಸಿಕ್ ಡೈರೆಕ್ಟರ್ ಅನೂಪ್ ಸೀಳಿನ್, ನಿರ್ದೇಶಕ ರೋಹಿತ್ ಅವರು ಇದ್ರು. ನಾವ್ ಏನ್ ಮಾಡ್ಬಹುದು ಅನ್ನೋ ಬಗ್ಗೆ ಒಂದು ಚಿಕ್ಕ ಡಿಸ್ಕಷನ್ ಮಾಡಿದ್ವಿ. ಅಷ್ಟೊತ್ತಿಗೆ ಸಿನೆಮಾದಲ್ಲಿ ಆಕ್ಟ್ ಮಾಡುವ ವಶಿಷ್ಠ, ಸಂಗೀತ ಭಟ್ ,ರಾಜೇಶ್ ನಟರಂಗ್, ಪೂರ್ಣಚಂದ್ರ ಎಲ್ಲರೂ ಬಂದ್ರು. ಇನ್ನು ಅತಿಥಿಗಳಾಗಿ ಪವನ್ ವಡೆಯರ್, ವಿಜಯ್ ಪ್ರಸಾದ್,ನವೀನ್ ಸಾಗರ್ ಹಾಜರಾದ್ರು.
ದೊಡ್ದಗಣೇಶನಿಗೆ ಪೂಜೆ ಮಾಡಿ ಕ್ಯಾಮೆರಾಗೂ ಪೂಜೆ ಮಾಡಿ ದೇವರ ಸನ್ನಿಧಿಯಲ್ಲೇ first shot ತಗೆದ್ರು dop ಅರವಿಂದ್ ಕಶ್ಯಪ್.

ಎಲ್ಲರಿಗೂ ಹೊಟ್ಟೆ ಹಸಿದಿದ್ದ ಕಾರಣ ಬೇಗನೇ ಮೂಹೂರ್ತ ಮುಗಿತು ಅನ್ಸುತ್ತೆ. ಟಿಫಿನ್ಗೆ ಪ್ರೊಡ್ಯೂಸರ್ ಖಾರ ಕಮ್ಮಿ ಹಾಕಿಸಿ ಉಪ್ಪಿಟ್ಟು,ಜಾಸ್ತಿ ದ್ರಾಕ್ಷಿ ,ಗೋಡಂಬಿ ಹಾಕಿಸಿ ಕೇಸರಿಬಾತ್ ಮಾಡಿಸಿದ್ರು. ಚಿತ್ರ ಪ್ರಾರಂಭದ ಖುಷಿಗೋ, ಹೊಟ್ಟೆ ಹಸಿವಿಗೋ ಎಲ್ಲರೂ ಎರೆಡೆರಡು ಸಲ ಬ್ಯಾಟಿಂಗ್ ಮಾಡಿದ್ರು.
ಎಲ್ಲರ್ ಬಾಯಲ್ಲೂ ಒಂದೇ ಮಾತು.. ಕೇಸರಿಬಾತ್ Top Class.. ಆಹಾ! ಆ ಕೇಸರಿಬಾತ್ ಬಗ್ಗೆನೇ ಎರಡು ಅಂಕಣ ಬರೀಬಹುದು!
ತಿಂಡಿ ಮುಗಿಸಿದ ಬಳಿಕ ನಾವು ಗಮನಿಸಿದ್ದು.. ತಡವಾಗಿ ಬಂದ ಪ್ರಕಾಶ ಬೆಳವಾಡಿ ಅವರಿಗೆ ಚೌಚೌ ಬಾತ್ ಜಸ್ಟ್ ಮಿಸ್ ಆಗಿದೆ ಅಂತ!
ಹೀಗಿತ್ತು ಈ ಚಿತ್ರದ ಮುಹೂರ್ತ..ನಾವು ಚಿತ್ರ ತಂಡ ಹಾಗೂ ಅತಿಥಿಗಳೊಂದಿಗೆ ಒಂದು ಸೆಲ್ಫಿ ತಗೊಂಡು ಖುಷ್ ಖುಷಿಯಾಗಿ ಮನೆಗ್ ಬಂದ್ವಿ.

ಕನ್ನಡ ಸಿನೆಮಾದ ಪರ್ವ ಕಾಲ ನಡೆಯುತ್ತಿದೆ! – ಅಜಯ್ ರಾಜ್

ಕನ್ನಡ ಸಿನೆಮಾದ ಪರ್ವ ಕಾಲ ನಡೆಯುತ್ತಿದೆ! – ಅಜಯ್ ರಾಜ್

ಶುದ್ಧಿ ಟ್ರೈಲರ್ ನೋಡಿದ್ ಮೇಲೆ ಎಲ್ಲರ ಬಾಯಲ್ಲಿಯೂ ಒಂದೇ ಮಾತು , ಹಾಲಿವುಡ್ ಲೆವೆಲ್ ಗೆ ಒಂದು ಕನ್ನಡ ಸಿನೆಮಾ
ತೆಗೆದಿದ್ದಾರೆ! ಅಷ್ಟೊಂದು ಮನೋಜ್ಞವಾಗಿ, ಅಷ್ಟೊಂದು ಕುತೂಹಲ ಹುಟ್ಟಿಸಿದೆ “ಶುದ್ಧಿ” ಸಿನೆಮಾ!
ಟ್ರೈಲರ್ ನಲ್ಲಿ ಕಂಡರೂ ಕಾಣದಂತೆ ಬಂದು ಹೋಗುವ ನಮ್ಮ ಅಜಯ್ ಅವ್ರ್ನ ಮಾತಾಡ್ಸಿದ್ವಿ,
ನಮ್ಮ ಸಂಭಾಷಣೆಯ ತುಣುಕು ಇಲ್ಲಿದೆ

ಹೊಸಬರ ಚಿತ್ರ “ಶುದ್ಧಿ”. ಆದರೂ ಟ್ರೈಲರ್ಗೆ ದೊಡ್ಡ ಮಟ್ಟಿಗೆ ರೆಸ್ಪಾನ್ಸ್ ಕೊಟ್ಟಿದಾರೆ ಕನ್ನಡ ಜನತೆ ಏನ್ ಹೇಳೋಕ್ ಇಷ್ಟ ಪಡ್ತೀರಾ ?

ಲೂಸಿಯಾ ಸಿನೆಮಾ ಕನ್ನಡ ಸಿನೆಮಾ ಕ್ಕೆ ಹೊಸ ಆಯಾಮ ಕೊಟ್ಟಿದೆ ಅಂದ್ರೆ ಉತ್ಪ್ರೇಕ್ಷೆ ಅಲ್ಲ .ಕನ್ನಡ ಸಿನಿ ಪ್ರೇಕ್ಷಕರು ಕೂಡ
ಹೊಸಬರ ಪ್ರಯತ್ನಕ್ಕೆ ಬೆನ್ನುತಟ್ಟುತ್ತ ಬಂದಿದ್ದಾರೆ. ಒಂದು ಒಳ್ಳೆ Content ಇರೋ ಸಿನೆಮಾ ಕೊಟ್ರೆ ಪ್ರೇಕ್ಷಕರು ಕೈಬಿಟ್ಟಿಲ್ಲ. They are
accepting un conventional movies also. ನಮ್ಮ ಸಿನಿಮಾನೂ ಒಪ್ಕೋಳ್ತಾರೆ ಅನ್ನೋ ಭರವಸೆ ಇದೆ

ಶುದ್ಧಿ; ಕಥಾವಸ್ತು ಬಗ್ಗೆ ಏನ್ ಹೇಳ್ತೀರಾ ?

ನಮ್ಮ ದೇಶದಲ್ಲಿ ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯ ವಿರುದ್ಧ ಮಾಡಿರುವ concept. ಮೂರು ನೈಜ ಘಟನೆಗಳ ಆದಾರದ ಮೇಲೆ
ರಚಿಸಿದೆ ಕಾಲ್ಪನಿಕ ಚಿತ್ರ ಇದು . ಹೆಸರೇ ಹೇಳುವಾಗೆ ಶುದ್ಧಿ ಅಂದರೆ -Purification. “ನಮ್ಮ ಆಲೋಚನೆಗಳು ಶುದ್ಧಿ ಆದಾಗಲೇ
ನಾವು ಆಂತರಿಕವಾಗಿ ಶುದ್ಧವಾಗಿರಲು ಸಾಧ್ಯ” ಅನ್ನೋದನ್ನ ಸಿನೆಮಾ ಮುಖಾಂತರ ತೋರ್ಸಿದೀವಿ.

visuals ಮತ್ತು background score ಬಗ್ಗೆ ?
ಆದರ್ಶ್ ಅವರು ಸಿನೆಮ್ಯಾಟೋಗ್ರಾಫರ್ ಗಾಗಿ ಹುಡುಕಾಟದಲ್ಲಿದಾಗ, ಆಂಡ್ರೂ ಅವರ ಒಂದು ಕಂಟೆಂಟ್ ಆನ್ಲೈನ್ ನಲ್ಲಿ ಸಿಕ್ಕಿತ್ತು. ಅವರ ವರ್ಕ್ ಇಷ್ಟವಾಗಿ ಆದರ್ಶ್ ಶುದ್ಧಿ ಸಿನೆಮಾದ ಸ್ಕ್ರಿಪ್ಟ್ ಅವರಿಗೆ ಕಳಿಸಿದ್ರು. ಸ್ಕ್ರಿಪ್ಟ್ ಓದಿ ಈ ಸಿನೆಮಾಗೆ ಒಪ್ಪಿಕೊಂಡ್ರು ಆಂಡ್ರೂ.

ಈ ಸಿನೆಮಾಗೆ ಹಿನ್ನೆಲೆ ಸಂಗೀತ, ಒರಿಜಿನಲ್ ಸೌಂಡ್ ಟ್ರ್ಯಾಕ್ ಎಲ್ಲಾ ಜೆಸ್ಸಿ ಕ್ಲಿಂಟನ್ ಅವರು ಮಾಡಿದ್ದು.
Background score ಸಿನಿ ಮಾದ ಬೆನ್ನಲಬು ಅಂತಾನೆ ಹೇಳ್ಬೇಕು.ಚಿತ್ರದಲ್ಲಿ ಒಂದೇ ಹಾಡು ಇರೋದು ಅದನ್ನ “ರಾಮ ರಾಮ ರೇ “ಖ್ಯಾತಿಯ ನೊಬಿನ್ ಅವ್ರು ಮಾಡಿದ್ದಾರೆ. ಅದೂ ಕೊಡ ಅದ್ಭುತವಾಗಿ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಆಡಿಯೋ ರಿಲೀಸ್ ಮಾಡ್ತೀವಿ

ಸಿನೆಮಾದಲ್ಲಿ ನಿಮ್ಮ ಪಾತ್ರ ?

ಟ್ರೈಲರ್ ನಲ್ಲಿ ಒಂದೇ ಶಾಟ್ ಅಲ್ಲಿದಿನಿ ಆದರೆ ಸಿನೆಮಾ ದಲ್ಲಿ ನನ್ನದು ಅತಿ ಬಹುಮುಖ್ಯ ಪಾತ್ರ ಅಂತಾನೆ ಹೇಳ್ಬವುದು. ಆದರೆ ಜಾಸ್ತಿ
ಏನು ಹೇಳಲ್ಲ . ಸಿನೆಮಾ ನೋಡಿ 🙂 ನಾನು ಉತ್ತಮ ವಿಲ್ಲನ್ ಸಿನೆಮಾ ಮಾಡೋ ಟೈಮ್ ಅಲ್ಲಿ ಆದರ್ಶ್ ಫೋನ್ ಮಾಡಿದ್ರು.
ಮುಂಚೆ ಅವರ ಜೊತೆ ಕಿರುಚಿತ್ರ ಮಾಡಿದ್ದೆ. ಇಂತಹ ಒಂದು ಒಳ್ಳೆ ಸಿನೆಮಾ ಹಾಗೂ ಒಳ್ಳೆ ಪಾತ್ರ ಕೊಟ್ಟ ಆದರ್ಶ ಗೆ ಹಾಟ್ಸ್ ಆಫ್

ಕೊನೆಯದಾಗಿ ನಮ್ಮ ಕನ್ನಡಾಭಿಮಾನಿಗಳಿಗೆ ಒಂದೆರಡು ಮಾತು ?

ನಾನು ಆಗ್ಲೇ ಹೇಳಿದಂಗೆ , ಅವ್ರು ಹೊಸಬರ ಸಿನೆಮಾ ನೋಡ್ತಿದಾರೆ ಹಾಗೆ ಹೊಸ ಹೊಸ ಕಲಾವಿದರು ಒಳ್ಳೊಳ್ಳೆ
ಕ್ವಾಲಿಟಿ ಕಂಟೆಟ್ನ್ ಕೊಡ್ತಿದಾರೆ. ಸೂಪರ್ ಸ್ಟಾರ್ಸ್ ಇಲ್ದಿರೋ ಸಿನೆಮಾ ಗೆಲ್ಲಿಸ್ತಿರೋ ಕನ್ನಡ ಪ್ರೇಕ್ಷಕನೇ ನಿಜವಾದ ಸೂಪರ್ ಸ್ಟಾರ್.
ನಮ್ಮ ಸಿನೆಮಾ ದಯವಿಟ್ಟು ನೋಡಿ ಪ್ರೋತ್ಸಾಹ ವಿರಲಿ

AND
“LET NO SINS OF MAN GO UNPUNISHED”