ಕವನಗಳು

ನನ್ನ ಮನದ ಭಾವನೆಗಳ ನದಿಗೆ ಕಟ್ಟಿದ ಆಣೆಕಟ್ಟು

ಕಳೆದು ಹೋಗಿರುವೆ ಹುಡುಕಿ ಕೊಡಿ..

ಸದಾ ಜೇಬಲ್ಲಿ ಕೂತು ಆಗೊಮ್ಮೆ ಈಗೊಮ್ಮೆ
ನನ್ನೇ ಮರೆತು ನಾನಿರುವ ಕಲ್ಪನಾ ಲೋಕವನ್ನು
ಕಂಡ ಹಾಗೆ ಹಾಳೆಗಳಿಗೆ ಇಳಿಸುತ್ತಿದ್ದ ನನ್ನ ಲೇಖನಿ
ಇಂದೇಕೋ ನನ್ನಿಂದ ದೂರ..
ಸ್ವಪ್ನಗಳಿಗೆ ಮಾತ್ರ ನಾನಿಂದು ಸ್ವಂತ
ವಾಸ್ತವಕ್ಕೆ ಮತ್ತೆ ಅಪರಿಚಿತ.

ದಾರಿ ಕಳೆದುಕೊಂಡಿರುವೆ ಹುಡುಕಿ ಕೊಡಿ!!
ಇದು ಯಾರ ಪ್ರಯಾಣ ಅನ್ನಿಸಿ ಒಮ್ಮೆಲೇ
ಯಾನ ನಿಲ್ಲಿಸುವ ಮನಸು. ಮತ್ತದೇ ಪ್ರಶ್ನೆ
ಯಾವ ದಾರಿ ಹಿಡಿಯಲಿ ? ಯಾವುದು ನನ್ನದು ?

ಕೂಡಿಟ್ಟ ಕನಸುಗಳನ್ನು ಕಳೆದಿರುವೆ ಹುಡುಕಿ ಕೊಡಿ
ನಾನು ಕೇವಲ ಕನಸುಗಳಿಗೆ ಮಾತ್ರ ಸ್ವಂತ , ಹೇಗಾದ್ರು ಮಾಡಿ ನನ್ನ ಹುಡುಕಿ ಕೊಡಿ!

ಕಳೆದು ಹೋಗಿರುವೆ ಹುಡುಕಿ ಕೊಡಿ..!!

ಬರೀ ಫ್ರೆಂಚ್ ಮಾತಾಡೋ ದೇಶದಲ್ಲಿ ಕೂತು ಬರೆದ ಒಂದಷ್ಟು ಹನಿಗಳು

ಕನಸಿನಲ್ಲಿ ನೀನು ಬಂದಂತೆ..
ಕಣ್ಣಿನಲ್ಲೇ ನನ್ನ ಕರೆದಂತೆ
ಕಿವಿಯಲೇನೋ ಪಿಸಿನುಡಿದಂತೆ
ನಗುವೆಯೇಕೆ ಏನು ತಿಳಿಯದಂತೆ..

ನಿನ್ನ ಕೈ ಹಿಡಿದು
ಒಂದೆರಡು ಕವನ ನುಡಿದು
ಅಪ್ಪುಗೆಯ ಬಯಸುವೆನು
ನೀನು ಒಪ್ಪಿದರೆ..
ನಿನ್ನ ಬೆರಳ ಹಿಡಿದು
ಬರೆಯುವೆನು ಎದೆಯಮೇಲೆ
ನನ್ನೆಲ್ಲ ಭಾವನೆಗಳ ಸುರಿದು
ತಿದ್ದಿ ಬಿಡು ನಾ ತಪ್ಪಿದರೆ..
ಅಪ್ಪಿ ಬಿಡು ನೀ ಒಪ್ಪಿದರೆ..

ಚಳಿಯು ಮೈಗೆ ಕಚಗುಳಿ ಕೊಟ್ಟಂತೆ
ಮಳೆಯೂ ಬಂದು ಮನ ನೆನದಂತೆ
ಕಂಡ ಕನಸು ನನಸಾದಂತೆ
ನಿನ್ನನು ನೋಡಿದರೆ….

ಹೃದಯದಲ್ಲಿ ಮೂಡಿದ ಮೊದಲ ಕಂಪನ…

ಶಾಂತವಾಗಿದ್ದ ನನ್ನ ಹೃದಯ ಸರೋವರದ ನೀರಿನ ಮೇಲೆ
ಅಂದೇನೋ ಬರೆದೆ ನೀನು ನಿನ್ನ ಬೆರಳಲ್ಲೇ
ಆಗ ಮೂಡಿದ ಪ್ರೇಮದ ಅಲೆಗಳು ಇನ್ನೂ ಕಂಪಿಸುತಲೇ ಇವೆ.
ಅಷ್ಟಕ್ಕೂ ನೀನು ಬರೆದದ್ದದ್ದಾದರೂ ಏನು ?
ಬರೆಯಲು ಕಾರಣವೇನು ?
ನಮ್ಮ ಪ್ರೀತಿಗೆ ನೀನು ಬಯಸಿದ ನೂತನ ಆಯಾಮವೇ ?
ನವಿಲುಗರಿಗಿಂತ ನವಿರಾದ ನೆನಪುಗಳ ನಡುವೆಯೂ
ನಿರಂತರವಾಗಿ ನಡೆಯುತ್ತಿದ್ದ ಕನಸುಗಳ ವಿನಿಮಯದ ನಡುವೆಯೂ
ನೀನು ಬರೆದಿಟ್ಟ ‘ವಿರಹ ಶಾಸನ’ವೇ ?
ನನ್ನ ಹೃದಯ ಈಗಲೂ ನಿನ್ನ ಬೆರಳನ್ನೇ ಹುಡುಕುತಿದೆ
ಉತ್ತರ ಪಡೆಯಲು…

ಸ್ವಪ್ನವ ಸ್ಪರ್ಶಿಸೊ ಸೋಜಿಗ ನೀನು …

ಸ್ವಪ್ನವ ಸ್ಪರ್ಶಿಸೊ
ಸೋಜಿಗ ನೀನು
ಕಣ್ಣಲ್ಲೇ ಕೊಲ್ಲುವ
ಮಾಂತ್ರಿಕ ನೀನು
ಯಾಕಿಷ್ಟು ಕಾಯೋದು ನಾನು
ಒಮ್ಮೆಲೇ ಸಿಗಬಾರದೇ ನೀನು !

ಹಿಡಿಯಲು ನೀನು ನನ್ನ ಕೈಯ
ಮರೆವೆನು ನಾನು ನನ್ನ ಮೈಯ
ವಿರಹದಿ ಮೂಡಿರಲು ಗಾಯ
ನಿನ್ನ ಕಂಡಕ್ಷಣವೇ ಮಾಯ!
ನಿನ್ನ ನೆನಪೇ ನನ್ನ ಉಳಿತಾಯ
ಅದನ್ನೂ ದೂಚು ಬಾ ಇನಿಯ…

ನಲ್ಮೆಯ ನೌಕೆಯ
ನಾವಿಕ ನೀನು
ವಿಸ್ಮಯ ಲೋಕದ
ನಾಯಕ ನೀನು
ಮತ್ತೆಷ್ಟು ಕಾಯೋದು ನಾನು
ನನ್ನಲ್ಲೇ ಸಿಗಬಾರದೇ ನೀನು !

ಮುಂಗುರಳ ಸರಿಸಿ ನೀನು ನೋಡಿದರೆ ನನ್ನನು …

ಮುಂಗುರಳ ಸರಿಸಿ ನೀನು
ನೋಡಿದರೆ ನನ್ನನು
ಇರಬಹುದೇ ನಾನು
ಪ್ರೇಮಿಸದೇ ನಿನ್ನನು
ಮನಸಿನ ಅರಮನೆ
ಉದ್ಘಾಟಿಸು ನೀನು
ಕನಸಿನ ಸಿಂಹಾಸನ
ಆಲಂಕರಿಸು ನೀನು !
ಈ ಒಲವಿಗೆ ನೂತನ
ಆಯಾಮ ನೀನು
ನಿನ್ನ ಗುಲಾಮ ನಾನು..
ನಿನ್ನ ಗುಲಾಮ ನಾನು !!

ಮುಂಗುರಳ ಸರಿಸಿ ನೀನು
ನೋಡಿದರೆ ನನ್ನನು …

ಮೊದಲ ಸಲ ನಿನ್ನ ನೋಡಿದಾಗ
ಎಲ್ಲ ಖುಷಿಯೂ ಒಮ್ಮೆಲೇ
ಸಿಕ್ಕಂತಾಯಿತು ಹೃದಯಕ್ಕೆ
ಬಿಡದೆ ನೀ ಹೀಗೆ ಕಾಡಿದಾಗ
ಪ್ರತಿ ಕನಸಲ್ಲಿಯೂ ಹೂಮಳೆ
ಮತ್ತೇನು ಬೇಕು ಪ್ರಣಯಕ್ಕೆ ?

ಒಲವಿನ ನೂತನ ಆಯಾಮ ನೀನು
ನಿನ್ನ ಗುಲಾಮ ನಾನು
ನಿನ್ನ ಗುಲಾಮ ನಾನು

ಬದುಕಿನ ಮೇಲಿನ ಅಸ್ಪಷ್ಟತೆ …

ಬದುಕಿನ ಮೇಲಿನ ಅಸ್ಪಷ್ಟತೆ
ಮನದ ಕಾರ್ಮುಗಿಲಿನ ಹಾಗೆ ದಟ್ಟವಾಗಿದೆ.
ಎಲ್ಲ ಉತ್ತರವೂ ಪ್ರಶ್ನೆಯಾಗೇ ಕಾಣುತ್ತಿದೆ, ಕಾಡುತ್ತಿದೆ
ಯಾರಿಗೂ ಹೇಳದ ಅಸಹಾಯಕತೆ
ಹೇಳಿಕೊಂಡರೂ ಮುಗಿಯದ ವ್ಯಥೆ
ಅರ್ಥವಿಲ್ಲದ, ಅಸಂಬಂಧ ಯೋಚನೆಗಳ
ಘರ್ಷಣೆ ಮನದೊಳಗೆ..
ಹುಡುಕಿದರೂ ಸಿಗದಾಗೆ
ಹುದುಗಿಹೋಗಿದೆ ಧೈರ್ಯ ನನ್ನೊಳಗೆ..
ಎಲ್ಲ ಸ್ನೇಹಿತರಿದ್ದಾರೆ, ಆದರೆ
ಸ್ನೇಹ ಗಟ್ಟಿಯಾಗಿ ಉಳಿದಿಲ್ಲ
ಎಲ್ಲ ಸಂಬಂಧಿಕರಿದ್ದಾರೆ, ಆದರೆ
ಸಂಬಂಧಗಳ ಬೇರು ಆಳವಾಗಿಲ್ಲ

ಈ ಬೆತ್ತಲೆ , ಕತ್ತಲೆ ಬದುಕಿಗೆ
ಬೆಳಕಿನ ವೇಷದ ಹಂಗು ಯಾಕೆ ?
ಸಾಯೋವರೆಗೆ ಈ ಬದಕನ್ನು
ಸಾಯಿಸುತ್ತಲೇ ಬದುಕಬೇಕೇ ?

ತಲೆಬುಡ ಇಲ್ಲದ ….

ಒಮ್ಮೆಮ್ಮೆ ಅನಿಸುವುದು
ಬದುಕು ಸುಳ್ಳು
ಸಾವು ಸತ್ಯ!

ಎಷ್ಟೇ ತಡೆದರೂ ಉಳಿಸಿಕೊಳ್ಳಲಾಗದ
ಕಣ್ಣೀರಿನ ಹನಿಗಳು..
ಗಲ್ಲದ ಮೇಲೆ ಹರಿದು ಹೋದಮೇಲೆ
ಎಲ್ಲಿಂದಲೋ ಬಂದ ಸಣ್ಣ ಧೈರ್ಯ…
ಮತ್ತದೇ ಭಯ…

ಎಷ್ಟು ಬೇಡಿಕೊಂಡರು ಏನನ್ನು
ಕೇಳದ,
ಎಷ್ಟು ಬೈದರೂ ಏನನ್ನು
ಮಾಡದ,
ಕಣ್ಣಿಗೂ ಕಾಣದ ದೇವರ ಎಂಬ ಸಣ್ಣ ನಂಬಿಕೆಯೊಂದೇ
ರಾತ್ರಿ ನಿದ್ದೆಗೆ ಆಸರೆ..

ಒಮ್ಮೆಲೇ ಬಂದು ಆವರಿಸಿ
ಎದೆಯನ್ನು ಆಕ್ರಮಿಸುವ
ಏಕಾಂತಕ್ಕೆ ಕಾರಣವೇ ಇಲ್ಲ …
ಬಿರುಗಾಳಿಯಂತೆ ಬಂದು
ಮಾನಸ ಗಂಗೋತ್ರಿಯಲ್ಲಿ
ತ್ಸುನಾಮಿ ಯನ್ನೇ ಎಬ್ಬಿಸಿ
ನೀಡುವ ನೋವು ಅಷ್ಟಿಷ್ಟಲ್ಲ…

ಇವೆಲ್ಲ ಒಣ ವೇದಾಂತ ಬಿಟ್ಟು
ಇರೊವಷ್ಟು ದಿನ ನಗು ನಗುತ
ಬದುಕು ಎಂದು ಬೈಯುವ
– ನನ್ನೊಳಗಿನ ನನಗರಿಯದವ..

ಈ ಪ್ರೀತಿ …

ನೀ ನನಗೋಸ್ಕರ

Nanagoskar

Try2