ಚುಟುಕುಗಳು

ಒಂದು ಉಸಿರಿನಲಿ ಬರೆದ ಸಾಲುಗಳು

ಎದೆಯ ಒಳಗೆ ಬರಲು ಬೇಕಾ ಸಮಯ..?!

ಇನಿಯ
ಎದೆಯ ಒಳಗೆ
ಬರಲು ಬೇಕಾ
ಸಮಯ..
ಗೆಳೆಯ
ಕೇಳೋ
ವಿಷಯ
ನಿನದೇ ನನ್ನ
ಹೃದಯ.

ಶಾಲೆಯ ನೆನಪು

ಶಾಲೆಯ ನೆನಪು…

ಭಾಷೆ…

“ನೀನು ನಿನ್ನ ಭಾಷೆಯನ್ನು ಪ್ರೀತಿಸಿದರೆ
ಭಾಷೆಯೂ ನಿನ್ನನ್ನು ಪ್ರೀತಿಸುತ್ತದೆ..”

ಒಂದಿಷ್ಟು ಪ್ರೇಮ ಹನಿಗಳು …

ಓ ಸ್ನೇಹದ ಹಿಮವೇ
ಮಳೆಯ ಹನಿಯಂತ ನಿನ್ನ ನಯನಗಳ ನೋಡುತ
ಬೆಳದಿಂಗಳನ್ನೇ ಹೊದ್ದು ಮಲಗಿರುವ ನಿನ್ನ ಕೆನ್ನೆಗಳ ನೋಡುತ
ನೂತನ ಲೋಕದ ದರ್ಶನ ನನಗಾಗಿದೆ..
ಕರಗದೇ ಕರುಣಿಸು ಹಿಮದ ಮಹಿಮೆ
ಬಂದರೂ ಬರಬಹುದು ಬಚ್ಚಿಟ್ಟ ಒಲುಮೆ…

ಯಾತನೆಗೂ ವೇತನವಿದ್ದಿದ್ದರೇ…

ಒಮ್ಮೆಲೇ ಬಂದು ಎದೆ ತಿವಿದು ಹೋಗುವ
ನೋವಿನ ಭಾವನೆ.
ನಿಟ್ಟುಸಿರು ಬಿಡುತ್ತಲೇ ಸಮಾಧಾನಗೊಳ್ಳಲು
ಹರಿಸಾಹಸ ಪಡುವ ಮನಸು..
ಕಣ್ಣೀರಿನ ಜೊತೆಗೆಯೇ ಚದುರಿಹೋದಂತಿದೆ
ಕೂಡಿಟ್ಟ ಕನಸು..
ಯಾತನೆಗೂ ವೇತನವಿದ್ದಿದ್ದರೇ ನಾನೀಗ
ಶ್ರೀಮಂತನಾಗುತ್ತಿದ್ದೆ !!

ಮನದ ದೇವಿ ನೀನು

ಮನದ ದೇವಿ ನೀನು
ನಾನು ನಿನ್ನ ಭಕ್ತ.
ನಿನ್ನ ಧ್ಯಾನದಲ್ಲೇ
ನಾನು ಅನುರಕ್ತ

ನಿನ್ನ ಮೌನವೇ ಮುನ್ನುಡಿ !!

ಹೃದಯ ಬರೆದ ಕವನ ಸಂಕಲನಕೆ
ನಿನ್ನ ಮೌನವೇ ಮುನ್ನುಡಿ
ನಿನ್ನ ನೆನಪುಗಳೇ ಪರಿವಿಡಿ
ನಿನ್ನ ಕನಸುಗಳೇ ಪುಟವಿಡಿ

ಅಳುವಿನ ಅಳಲು ….

ಅಳುತ್ತ ಕುಳಿತಾಗ ಕರ್ಚಿಫ್ ಕೊಟ್ಟು ಹೋಗುವರೆ ಜಾಸ್ತಿ
ಅಳುವ ಕಣ್ಣುಗಳಿಗೆ ಒರೆಸುವ ಕೈಗಳು ಕಡಿಮೆ!

ಹಳೇ ಕವನಕ್ಕೆ ಹೊಸ ರೂಪ!

 

 

Thank you!

10000+ views and counting.

Thank you !Thank you! so much for the support !

ತಿದ್ದಿ ತೀಡಿದ ಹಾಗೂ ನನ್ನನ್ನೂ ಒಬ್ಬ ಕವಿಯನ್ನಾಗಿ ಮಾಡಿದ ಎಲ್ಲ ಓದುಗ ಬಾಂಧವರಿಗೆ ಧನ್ಯವಾದಗಳು.
ಕನ್ನಡ ಕವಿ ಎಂದು ಕರೆಸಿಕೊಳ್ಳುವುದೇ ನನ್ನ ಪುಣ್ಯ, ಈ ಜೀವ ಧನ್ಯ