ಚುಟುಕುಗಳು

ಒಂದು ಉಸಿರಿನಲಿ ಬರೆದ ಸಾಲುಗಳು

ಮುಕ್ತ ಮುಕ್ತ ..!

FotorCreated

ಐಟಿ ಕಣೋ ಐಟಿ …

ಐಟಿ ಬದುಕಿನ ಬಗ್ಗೆ ನಾನು ಬರೆದ ಕೆಲವು ಚುಟುಕುಗಳನ್ನು ಒಪ್ಪಿಕೊಂಡಿದ್ದಿರಿ. ಮತ್ತೆ ಒಂದಿಷ್ಟು ಚುಟುಕುಗಳನ್ನು ಹೊತ್ತು ತರುತ್ತೇನೆ. ನಿಮ್ಮ ಬೆಂಬಲ ಹೀಗೆ ಇರಲಿ..

try1

Try2

ಐಟಿವಚನ-೧೫

ಆಫೀಸಿನ ಹತ್ತಿರವೇ ಮನೆಯಿರಲು
ಅಪ್ಪ ಅಮ್ಮ ಜೊತೆಯಿರಲು
ದಿನವೂ ಅಮ್ಮನ ಅಡುಗೆ ಸಿಗುತಿರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ
– ಐಟಿತಜ್ಞ!

ಮತ್ತೆ ಕವಿಯಾಗುವ ಆಸೆ

ಮತ್ತೆ ಕವಿಯಾಗುವ ಆಸೆ
ನನ್ನೊಳಗಿನ ಉಸಿರಾಡುವ ಯೋಚನೆಗಳಿಗೆ
ಮಾತು ಕಲಿಸಿ
ಬದುಕಿದ್ದು ಸತ್ತಂತಿರುವ ನನ್ನೊಳಗಿನ ಅದೆಸ್ಟೋ
ಕನಸುಗಳಿಗೆ ಜೀವ ಕೊಡಿಸಿ.

ಸೇರಬಹುದೇ ನಾನು ಕವನದೊಳು ? ಕರಗಬಹುದೇ ನಾನು ?
ಕರಗಿ ಕವಿತೆಯಾಗಬಹುದೇ ನಾನು

 

ಐಟಿವಚನ -೧೨

customerಗೆ bucket ಕೊಡಿಸಿ
developerಗೆ Onsite ಅಸೆ ತೋರಿಸಿ
ಹಗಲು ರಾತ್ರಿ ಯನ್ನದೇ ದುಡಿಸಿ
ಕೆಲಸಕ್ಕೆ ಬಾರದವರನ್ನು cc ಯಲ್ಲಿಟ್ಟು
ಒಂದೆರಡು appreciation mail ಕಳಿಸಿ
Appraisal timeಲ್ಲಿ ಬೆವರಿಳಿಸಿ ,ನೀರು ಕುಡಿಸುವನೇ
Manager ಎನ್ನೆಂದ
– ಐಟಿತಜ್ಞ 

ಐಟಿತಜ್ಞ – ೮

ಊರಲ್ಲಿ ಮನೆಯಿದ್ದರೂ
ಬೆಂಗಳೂರಲ್ಲಿ ಮನೆಗಾಗಿ Home Loanu
ಮನೆಯಲ್ಲಿ ಬೈಕು ಎರಡೆರಡಿದ್ದರೂ
ಕಾರ್ ತೆಗೆದುಕೊಳ್ಳುವ planu 
ಎಷ್ಟು salary ಇದ್ದರೂ
savings ಇಲ್ಲವೆನ್ನುವನು
– ಐಟಿತಜ್ಞ

ಐಟಿವಚನ – ೭

ಹೆತ್ತವರನ್ನು ಅನಾಥಾಶ್ರಮದಲ್ಲಿ ಬಿಟ್ಟು
ಹೊತ್ತ ಭೂಮಿಯನ್ನೇ ಮರೆತು
ಆತ್ಮಾಭಿಮಾನವನ್ನೂ ದುಡ್ಡಿಗೆ ಬಲಿಕೊಟ್ಟು
ಪರದೇಶದಲ್ಲಿ ಪರದೇಸಿಯಾದರೂ ಅಲ್ಲೇ ಬೀಡುಬಿಟ್ಟು
ವರ್ಷಕ್ಕೆ ಒಮ್ಮೆ ಗಾಂಧಿಟೊಪ್ಪಿಗೆ ತೊಟ್ಟು
ಮಾತೃಭೂಮಿಗೆ ಮರಳುವರನ್ನು ಮರುಳರೆನ್ನೆಂದ
– ಐಟಿತಜ್ಞ

ಐಟಿವಚನ -೬

ಶುಕ್ರುವಾರಕ್ಕೊಂದು ಸಿನಿಮಾ ನೋಡಿ
ಹೋಗೋಕೆ ಬರೋಕೆ Ola, Uber ಬುಕ್ ಮಾಡಿ
ಉಳಿದ ದುಡ್ಡಲ್ಲೆ ಎಣ್ಣೆ ಪಾರ್ಟಿ ಮಾಡಿ
ಸ್ಯಾಲರಿ ಬರೋವರಗೆ ಬಾಯಿ ಬಡ್ಕೋ ಎಂದ
– ಐಟಿತಜ್ಞ

ಐಟಿತಜ್ಞ-೫

ಎಂಜಿನಿಯರ್ ಎಂಬುವನು ಗರ್ವದಿಂದಾದವನೇ ?
Semesterಗೊಂದು Subjectಉಳಿಸಿ
ಕೊನೆ Semesterಗೆ ಎಲ್ಲವೂ ಗುಡಿಸಿ
ಕ್ಯಾಂಪಸ್ಸಿನಲ್ಲೆ ನೌಕರಿ ಗಳಿಸಿ
Joining Dateಗೆ ಕಾಯುವನೇ
– ಐಟಿತಜ್ಞ