ಓ ಸ್ನೇಹದ ಹಿಮವೇ
ಮಳೆಯ ಹನಿಯಂತ ನಿನ್ನ ನಯನಗಳ ನೋಡುತ
ಬೆಳದಿಂಗಳನ್ನೇ ಹೊದ್ದು ಮಲಗಿರುವ ನಿನ್ನ ಕೆನ್ನೆಗಳ ನೋಡುತ
ನೂತನ ಲೋಕದ ದರ್ಶನ ನನಗಾಗಿದೆ
ಕರಗದೇ ಕರುಣಿಸು ಹಿಮದ ಮಹಿಮೆ
ಬಂದರೂ ಬರಬಹುದು ಬಚ್ಚಿಟ್ಟ ಒಲುಮೆ
ಅರಳಿದ ಹೂವು ನಕ್ಕಂತ ನಗು ನಿನ್ನದು..
ಸುರಿದ ಮಳೆಗೆ ಕುಣಿಯುವ ನವಿಲಂತೆ
ನಿನ್ನ ನಯನವು..
ಎಳೆಬಿಸಿಲು ಎಲ್ಲೆಲ್ಲೂ ನಿನ್ನ ಹುಡುಕಿ
ಕೊನೆಗೆ ನಿನ್ನ ಕೆನ್ನೆ ಮೇಲೆ ಬಿದ್ದಂತಿದೆ..
ಮುಂಜಾನೆಯ ಮಂಜಿನ ಹಾಗೆ ಹಿತವಾಗಿದೆ..
ನಿನ್ನ ಮುಗುಳ್ನಗೆಗೆ ಈ ಮುಂಜಾವೆ ಪ್ರಾಯೋಜಿತ