ನಾ ಕಂಡಂತೆ

ನನ್ನ ಛಾಯಾಗ್ರಹಣ

ನಾನೇ ಗಡ್ಡಧಾರಿ…!

ಇರಲಿ ಬಿಡಿ ಗಡ್ಡ
ಶೇವ್ ಮಾಡೋನ್ ದಡ್ಡ
ಬ್ಲೇಡು ಬೇಡ ಬ್ರದರು
ಗಡ್ಡದು ನೋಡಿ ಖದರು!

ಗಡ್ಡ ಬಿಡೋದೇ ಟ್ರೆಂಡು
ಬಿಟ್ಟೊರೆಲ್ಲ ನಂಗೆ ಫ್ರೆಂಡು
ನಿಮ್ಮ ಖುಷಿಗೆ ಇರಲಿ ಗಡ್ಡ
ಫೀಲಿಂಗ್ಸ್ ಗೆ ಬಿಟ್ಟೋನು ದಡ್ಡ
ಹುಡ್ಗೀರು ಗಡ್ಡಕ್ಕೆ ಫ್ಯಾನು
ಮಾಡ್ಕೋಬೇಡಿ ಮುಖ ಕ್ಲಿನು !
ಮೀಸೆ ತಿರುವಿ ಗಡ್ಡ ಸವರಿ
ಹೇಳಿ,
ನಾನೇ ಗಡ್ಡಧಾರಿ
ಬಿಡ್ರಿ ನಂಗೆ ದಾರಿ !

Advertisements

ಧ್ಯಾನ!

ಕಡಲ ಧ್ಯಾನ
ಹೃದಯದ ಮೌನ
ಮೂಡಿಬರುತಿದೆ ಕವನ..
ಅಲೆಗಳ ಸೆಳೆತ
ಹೃದಯದ ಬಡಿತ
ಹೇಳುವುದೇ ಸಾಂತ್ವಾನ ?

ಅಲೆಗಳು ಬಂದು
ಕಾಲು ತಟ್ಟುವಾಗ
ಮನ ಮುಟ್ಟಿದಂತೆ ಭಾವ..
ಎಷ್ಟೇ ದುಃಖವಿರಲಿ ಎದೆಯೊಳಗೆ
ಕಡಲ ಮುಂದೆ ನಿಂತರೆ
ಹಗುರಾಗುವುದು ಜೀವ..