ಭಾವಕೊಂದು ಸಾಲು

ಮನಸಿನಲಿ ಮೂಡಿದ ,ಕಾಡಿದ ಭಾವಕ್ಕೆ ಬರೆದ ಸಾಲು

ಕಹಳೆ ಅರ್ಪಿಸುವ ರಾಜ್ಯ ಮಟ್ಟದ ಕಥೆ ಸ್ಪರ್ಧೆ

**ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು**
ಕಣ್ಣಾರೆ ಕಂಡಿದ್ದೋ , ಕಲ್ಪನೆಯಲ್ಲಿ ಕನವರಿಸಿದ್ದೋ , ವಿಧಿಯನ್ನು ಕಾಲದ ಕಟಕಟೆಯಲ್ಲಿ ನಿಲ್ಲಿಸಿ ಸರಿ ತಪ್ಪುಗಳ ವಿಮರ್ಶಿಸಿದ್ದೋ ಎಲ್ಲವನ್ನೂ ಅಕ್ಷರಕ್ಕಿಳಿಸಿ..! “ಕಹಳೆ” ಯ ಕಥಾಸ್ಪರ್ಧೆ” ಯಲ್ಲಿ ಭಾಗವಹಿಸಿರಿ!
ಸ್ಪರ್ಧೆಯ ನಿಯಮಗಳು :
೧. ಹರಿಯುವ ಅಕ್ಷರದ ಹೊಳೆಗೆ ತಡೆಯೇಕೆ ?ಕಥೆಗೆ ಪದಗಳ ಮಿತಿಯಿಲ್ಲ.
೨. ಒಬ್ಬರು ಎಷ್ಟು ಕಥೆಗಳನ್ನು ಬೇಕಾದರೂ ಕಳುಹಿಸಬಹುದು.
೩. ನಿಮ್ಮ ಕಥೆಗಳನ್ನು “ಕಹಳೆ” ಫೇಸ್ಬುಕ್ ಪುಟದಲ್ಲಿ ,ನಮ್ಮ ಕರ್ನಾಟಕ ಮಿಮ್ಸ್ ಹಾಗೂ ಇರುವೆ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಲಾಗುವುದು.
೪. ನಾಡಿನ ಪ್ರಖ್ಯಾತ ಬರಹಗಾರರಿಂದ ವಿಜೇತರನ್ನು ಆಯ್ಕೆ ಮಾಡಲಾಗುವುದು.
೫. ವಿಜೇತರಿಗೆ ಸಾವನ್ನ ಪಬ್ಲಿಕೇಶನ್ ರವರಿಂದ ಪುಸ್ತಕಗಳು, ಇರುವೆ ತಂಡದಿಂದ ಗಿಫ್ಟ್ ಕೂಪನ್ಸ್ ಹಾಗೂ ನಮ್ಮ ಕರ್ನಾಟಕ ಮಿಮ್ಸ್ ಅವರಿಂದ ಕೂಡ ಬಹುಮಾನಗಳು ಕಾದಿವೆ!.
೬. ಸ್ಪರ್ಧೆಯ ಕುರಿತ ಎಲ್ಲಾ ವಿಷಯಗಳಲ್ಲಿ ಕಹಳೆಯ ನಿರ್ಣಯವೇ ಅಂತಿಮ ನಿರ್ಣಯ.
ನಿಮ್ಮ ಕಥೆಗಳನ್ನು ನುಡಿ ಇಲ್ಲವೇ ಯೂನಿಕೋಡ್’ನಲ್ಲಿ ಟೈಪ್ ಮಾಡಿ hello@kahaLe.org ಗೆ ಇಮೇಲ್ ಮಾಡಿ.
***ನಿಮ್ಮ ಕಥೆಗಳು ನಮಗೆ ತಲುಪಲು ಏಪ್ರಿಲ್ 10th , 2017 ಕೊನೆಯ ದಿನಾಂಕವಾಗಿರುತ್ತದೆ.***
ಸ್ಪರ್ಧೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಫಾಲೋ ಮಾಡಿ
https://www.facebook.com/Kahale.org/
https://www.instagram.com/kahale_org/
www.kahale.org

Advertisements

ಐಟಿತಜ್ಞ -೩

ಓದುಗರೇ ನಿಮಗೊಂದು ಸಣ್ಣ ಪ್ರಶ್ನೆ!

ಮೊದಲಿಗೆ ನನ್ನ ಬ್ಲಾಗ್ ಓದುತ್ತ ಹರಸುತ್ತಾ ಬಂದಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು.
ನಿಮಗೆ ನನ್ನೆರಡು ಸಣ್ಣ ಪ್ರಶ್ನೆಗಳು

  • ನೀವು ಯಾವುದನ್ನೂ ತುಂಬಾ ಇಷ್ಟ ಪಟ್ಟು ಓದುತ್ತೀರಾ ? ಕಥೆಯೋ ,ಕಾದಂಬರಿಯೋ ಅಥವಾ ಬೇಸಿಗೆ ಕಾಲದಲ್ಲಿ ಬಂದ ಮಳೆಯಂತೆ ಖುಷಿಕೊಡುವ ಕವಿತೆಯೋ ?

ಯಾತನೆಗೂ ವೇತನವಿದ್ದಿದ್ದರೇ…

ಒಮ್ಮೆಲೇ ಬಂದು ಎದೆ ತಿವಿದು ಹೋಗುವ
ನೋವಿನ ಭಾವನೆ.
ನಿಟ್ಟುಸಿರು ಬಿಡುತ್ತಲೇ ಸಮಾಧಾನಗೊಳ್ಳಲು
ಹರಿಸಾಹಸ ಪಡುವ ಮನಸು..
ಕಣ್ಣೀರಿನ ಜೊತೆಗೆಯೇ ಚದುರಿಹೋದಂತಿದೆ
ಕೂಡಿಟ್ಟ ಕನಸು..
ಯಾತನೆಗೂ ವೇತನವಿದ್ದಿದ್ದರೇ ನಾನೀಗ
ಶ್ರೀಮಂತನಾಗುತ್ತಿದ್ದೆ !!

ಹೀಗೊಂದು ಸ್ವಪ್ನದ ಸಲ್ಲಾಪ…

ಅವನು ಅವಳ ಕೈಯನ್ನು ಹಿಡಿಯಲು ಒಪ್ಪಿಗೆ ಕೇಳಿದನು..
“ನನ್ನ ಕೈಹಿಡಿಯಲು ಯಾಕಿಷ್ಟು ಆತುರ ?”ಅಂತ ಕೇಳಿದಳು..
“ನಿನ್ನ ಕೈ ರೇಖೆಗಳು, ನನ್ನ ಕೈ ರೇಖೆಗಳು ಬೆಸೆಯಲಿ … ನಮ್ಮ ಬದುಕಿನ ಹಾಗೆ ” ಎಂದ.
ಅವಳ ಕಣ್ಣಲ್ಲಿ ನೀರಾಡಿತ್ತು…

“ಆ ಮೋಡಗಳಿಗೆ ಮುದ್ದಿಸಬೇಕು” ಎನಿಸಿದೆ ಎಂದನು..
“ಹೌದಾ ! ಬಲು ಚಂದ ನಿನ್ನ ಕಲ್ಪನೆ “ಎಂದಳು..
“ನಿನ್ನ ಕೆನ್ನೆಗಳೇ ಆ ಬೆಳ್ಳಿ ಮೋಡಗಳಂತೆ ಇದೆ ” ಎನ್ನುತ್ತಾ ಮುತ್ತಿಟ್ಟನು..
ಅವಳು ನಾಚಿ ನೀರಾದಳು … ಕವಿದ ಮೋಡ ಸುರಿದ ಮಳೆಯಂತೆ…

ನೀನು

ನೀನು
ಕನಸಿನ ಪುಟದೊಳಗೆ
ನವಿರಾಗಿ ಮೂಡಿದ
ನವಿಲುಗರಿ!

ನೀನು
ನನ್ನ ಅಂತರಂಗದ
ನಿರಂತರ ಅನ್ವೇಷಣೆ !

ಮತ್ತೆ ಕವಿಯಾಗುವ ಆಸೆ

ಮತ್ತೆ ಕವಿಯಾಗುವ ಆಸೆ
ನನ್ನೊಳಗಿನ ಉಸಿರಾಡುವ ಯೋಚನೆಗಳಿಗೆ
ಮಾತು ಕಲಿಸಿ
ಬದುಕಿದ್ದು ಸತ್ತಂತಿರುವ ನನ್ನೊಳಗಿನ ಅದೆಸ್ಟೋ
ಕನಸುಗಳಿಗೆ ಜೀವ ಕೊಡಿಸಿ.

ಸೇರಬಹುದೇ ನಾನು ಕವನದೊಳು ? ಕರಗಬಹುದೇ ನಾನು ?
ಕರಗಿ ಕವಿತೆಯಾಗಬಹುದೇ ನಾನು

 

ಗೊತ್ತಿಲ್ಲ!

ಹಲವು ದಿನಗಳ ನಂತರ ಒಂದೆರಡು ಸಾಲುಗಳನ್ನು ಬರೆದೆ. ಅರ್ಥಿಹೀನವಾಗಿದ್ದರೆ ಕ್ಷಮಿಸಿ 🙂

ಯಾವುದು ಈ ಪಯಣ ?

ನಾನು ಹುಡುಕಿದೇನೋ
ನನ್ನನ್ನೇ ಹುಡುಕಿ ಈ ದಾರಿ ನನ್ನ ಸೇರಿತೋ ಗೊತ್ತಿಲ್ಲ!
ಹೋಗುತ್ತಿರುವುದೋ ಸರಿ ದಾರಿಯೋ ? ಗೊತ್ತಿಲ್ಲ
ಕೆಟ್ಟ ದಾರಿಯ ಅರಿವೂ ನನಗಿಲ್ಲ , ಹಿಡಿದ್ದಿದ್ದರೂ ಇನ್ನು ನನಗೆ ಅರಿವಾಗಿಲ್ಲ
ಎಲ್ಲರಿದ್ದೂ ಏಕಾಂಗಿಯಾಗಿದ್ದೇನೆ ಎನ್ನುವ ಸತ್ಯ ಸುಳ್ಳಲ್ಲ !!
ಹಿಂತಿರುಗಿ ಹೋಗಿಬಿಡಲೇ ಎಂದು ತಿರುಗಿ ನೋಡಿದರೆ
ಹಿಂದೆ ದಾರಿಯೇ ಇಲ್ಲ ! ನನ್ನ ದಾರಿಯನ್ನು ನಾನೇ ಅಳಿಸಿಬಿಟ್ಟನೇ? ಗೊತ್ತಿಲ್ಲ
ಇದು ನನ್ನ ಪಯಣವೋ ?
ಮತ್ತೊಬ್ಬರ ಪಯಣಕ್ಕೆ ನಾನಿಲ್ಲಿ ದಾರಿಯೋ ?
ಗೊತ್ತಿಲ್ಲ!