ವಿಚಿತ್ರ ಜೀವನ

ಬದುಕಿನ ಅಸ್ಪಷ್ಟ ಸತ್ಯಗಳನ್ನು ನೋಡಿ ಬರೆದ ಸಾಲುಗಳು

ಸಿಗ್ನಲ್

ಕೆಂಪು ಸಿಗ್ನಲ್ ಬಿದ್ದು
ರಸ್ತೆಬದಿ ಭಿಕ್ಷೆ ಬೇಡುವವರಿಗೆ
ಗ್ರೀನ್ ಸಿಗ್ನಲ್ ಕೊಟ್ಟ ಹಾಗೆ
ಒಬ್ಬರಿಗೆ ಟ್ರಾಫಿಕ್ ಸಂಕಷ್ಟ
ಇನ್ನೊಬರಿಗೆ ಊಟಕ್ಕೆ ಸಂಕಟ

ಹೆಸರು


ಉಸಿರು ಇರುವವರೆಗೆ ಮಾತ್ರ 
ನಮ್ಮ ಹೆಸರು ನಮ್ಮ ಜೊತೆ 
ಉಸಿರು ನಿಂತ ಬಳಿಕ 
ನಮ್ಮ ಹೆಸರು ‘ಶವ’ವಂತೆ!

ವಿಚಿತ್ರ ಜೀವನ..

Image

ರಸ್ತೆ ಬದಿ ಬೇಡುವ ತಟ್ಟೆಗಳಲ್ಲಿ
ಒಂದೂ ಅನ್ನದ ಅಗಳು ನಾ ಕಾಣಲಿಲ್ಲ
ಮದುವೆ ಮಂಟಪದ ನೆಲದ ಮೇಲೆ
ರಾಶಿ ರಾಶಿ ‘ಅಕ್ಕಿ’