Honeyಗವನಗಳು

ಮಿನಿಗವನಗಳು..

ನಾನೇ ಗಡ್ಡಧಾರಿ…!

ಇರಲಿ ಬಿಡಿ ಗಡ್ಡ
ಶೇವ್ ಮಾಡೋನ್ ದಡ್ಡ
ಬ್ಲೇಡು ಬೇಡ ಬ್ರದರು
ಗಡ್ಡದು ನೋಡಿ ಖದರು!

ಗಡ್ಡ ಬಿಡೋದೇ ಟ್ರೆಂಡು
ಬಿಟ್ಟೊರೆಲ್ಲ ನಂಗೆ ಫ್ರೆಂಡು
ನಿಮ್ಮ ಖುಷಿಗೆ ಇರಲಿ ಗಡ್ಡ
ಫೀಲಿಂಗ್ಸ್ ಗೆ ಬಿಟ್ಟೋನು ದಡ್ಡ
ಹುಡ್ಗೀರು ಗಡ್ಡಕ್ಕೆ ಫ್ಯಾನು
ಮಾಡ್ಕೋಬೇಡಿ ಮುಖ ಕ್ಲಿನು !
ಮೀಸೆ ತಿರುವಿ ಗಡ್ಡ ಸವರಿ
ಹೇಳಿ,
ನಾನೇ ಗಡ್ಡಧಾರಿ
ಬಿಡ್ರಿ ನಂಗೆ ದಾರಿ !

ನೆನಪಿನ ತುಪ್ಪ

ಅವಳನ್ನು ಮತ್ತೆ ಕಂಡಾಗ
ಹೃದಯದಲಿ ಉರಿಯುತ್ತಿದ್ದ
ಒಲವಿನ ಗಾಯಕ್ಕೆ
ಅವಳ ನೆನಪಿನ ತುಪ್ಪ ಸುರಿದಂತಾಯ್ತು

ಮರಳಿ ಬಾ

ಎದೆಯಲಿ ನೀನು
ಬಿಟ್ಟು ಹೋದ ಹೆಜ್ಜೆ ಗುರುತಿಗೂ
ಹೊಸ ಕನಸಿನ ಗೆಜ್ಜೆಕಟ್ಟಿರುವೆ
ಮರಳಿ ಬಾ
ನನ್ನ ಹೃದಯ ಮತ್ತೆ ಸದ್ದು ಮಾಡಲು

 

ದೂರು

ನನ್ನ ದೂರದೇ
ನನ್ನಿಂದ ದೂರವಾದೆ
ನೀನು
ನಿನ್ನನ್ನು ದೂರಿ
ನಿನ್ನ ನೆನಪಿಗೆ
ನಾ ದೂರನಾಗಲಾರೆ

(ರ)ಕವಿ

ಅವಳ ಸವಿನುಡಿಗೆ
 ನಾನು ಕವಿಯಾದೆ..
ಆದರೆ
ಅವಳ ಮನದ ಮುಗಿಲಿಗೆ
ಎಂದೂ ಬಾರದ ರವಿಯಾದೆ

ಮೌನ

ಅವಳದ್ದು ಸಾಟಿಯಿಲ್ಲದ ಮೌನ
ಅವಳಿಗೆ ನನ್ನ ಮಾತಿನ ಸನ್ಮಾನ

ಬೆಳಕು

ಅವಳ ಕಣ್ಣಂಚಿನ ಬೆಳಕಿಗೆ
ಅಸುನೀಗಿದೆ
ನನ್ನ ಮನದ ಕತ್ತಲು

ಒಲವಿನ ಮಳೆ

ಅವಳ ಕಣ್ಣ ಮಿಂಚಿಗೆ
ನನ್ನ ಹೃದಯ ಗುಡುಗಿತು
ಸುರಿದಿದ್ದು ಒಲವಿನ ಮಳೆ

ನೆನಪು

ಅವಳ ನೆನಪು
ನನ್ನ ಕಣ್ಣೀರು ಮಾತನಾಡಿದ್ದು
ಅವಳ ಹೃದಯಕ್ಕೆ ಕೇಳದೇ ಹೋಯಿತು

ನೀನು

ನನ್ನ ಮಾತಿನ ಮೌನ
ನನ್ನ ಮೌನದ ಮಾತು

ನನ್ನ ಹೃದಯದ ಪಾಡು
ನಾ ಬರೆದ ಹಾಡು

ನನ್ನ ಜೀವದ ಉಸಿರು
ಈ ಉಸಿರಿನ ಜೀವ

ನನ್ನ ಪ್ರೀತಿಯ ನೆನಪು
ನೆನಪಿನ ಕಣ್ಣೀರು