ಕವನಗಳು

ನನ್ನ ಮನದ ಭಾವನೆಗಳ ನದಿಗೆ ಕಟ್ಟಿದ ಆಣೆಕಟ್ಟು

ಎದೆಯ ಒಳಗೆ ಬರಲು ಬೇಕಾ ಸಮಯ..?!

ಇನಿಯ
ಎದೆಯ ಒಳಗೆ
ಬರಲು ಬೇಕಾ
ಸಮಯ..
ಗೆಳೆಯ
ಕೇಳೋ
ವಿಷಯ
ನಿನದೇ ನನ್ನ
ಹೃದಯ.

ನಿನ್ನ ಮೌನವೇ ಮುನ್ನುಡಿ !!

ಹೃದಯ ಬರೆದ ಕವನ ಸಂಕಲನಕೆ
ನಿನ್ನ ಮೌನವೇ ಮುನ್ನುಡಿ
ನಿನ್ನ ನೆನಪುಗಳೇ ಪರಿವಿಡಿ
ನಿನ್ನ ಕನಸುಗಳೇ ಪುಟವಿಡಿ

ಸ್ವಪ್ನವ ಸ್ಪರ್ಶಿಸೊ ಸೋಜಿಗ ನೀನು …

ಸ್ವಪ್ನವ ಸ್ಪರ್ಶಿಸೊ
ಸೋಜಿಗ ನೀನು
ಕಣ್ಣಲ್ಲೇ ಕೊಲ್ಲುವ
ಮಾಂತ್ರಿಕ ನೀನು
ಯಾಕಿಷ್ಟು ಕಾಯೋದು ನಾನು
ಒಮ್ಮೆಲೇ ಸಿಗಬಾರದೇ ನೀನು !

ಹಿಡಿಯಲು ನೀನು ನನ್ನ ಕೈಯ
ಮರೆವೆನು ನಾನು ನನ್ನ ಮೈಯ
ವಿರಹದಿ ಮೂಡಿರಲು ಗಾಯ
ನಿನ್ನ ಕಂಡಕ್ಷಣವೇ ಮಾಯ!
ನಿನ್ನ ನೆನಪೇ ನನ್ನ ಉಳಿತಾಯ
ಅದನ್ನೂ ದೂಚು ಬಾ ಇನಿಯ…

ನಲ್ಮೆಯ ನೌಕೆಯ
ನಾವಿಕ ನೀನು
ವಿಸ್ಮಯ ಲೋಕದ
ನಾಯಕ ನೀನು
ಮತ್ತೆಷ್ಟು ಕಾಯೋದು ನಾನು
ನನ್ನಲ್ಲೇ ಸಿಗಬಾರದೇ ನೀನು !

ಭಾವದ ಅಲೆಗಳು!

ಮುಂಗುರಳ ಸರಿಸಿ ನೀನು ನೋಡಿದರೆ ನನ್ನನು …

ಮುಂಗುರಳ ಸರಿಸಿ ನೀನು
ನೋಡಿದರೆ ನನ್ನನು
ಇರಬಹುದೇ ನಾನು
ಪ್ರೇಮಿಸದೇ ನಿನ್ನನು
ಮನಸಿನ ಅರಮನೆ
ಉದ್ಘಾಟಿಸು ನೀನು
ಕನಸಿನ ಸಿಂಹಾಸನ
ಆಲಂಕರಿಸು ನೀನು !
ಈ ಒಲವಿಗೆ ನೂತನ
ಆಯಾಮ ನೀನು
ನಿನ್ನ ಗುಲಾಮ ನಾನು..
ನಿನ್ನ ಗುಲಾಮ ನಾನು !!

ಮುಂಗುರಳ ಸರಿಸಿ ನೀನು
ನೋಡಿದರೆ ನನ್ನನು …

ಮೊದಲ ಸಲ ನಿನ್ನ ನೋಡಿದಾಗ
ಎಲ್ಲ ಖುಷಿಯೂ ಒಮ್ಮೆಲೇ
ಸಿಕ್ಕಂತಾಯಿತು ಹೃದಯಕ್ಕೆ
ಬಿಡದೆ ನೀ ಹೀಗೆ ಕಾಡಿದಾಗ
ಪ್ರತಿ ಕನಸಲ್ಲಿಯೂ ಹೂಮಳೆ
ಮತ್ತೇನು ಬೇಕು ಪ್ರಣಯಕ್ಕೆ ?

ಒಲವಿನ ನೂತನ ಆಯಾಮ ನೀನು
ನಿನ್ನ ಗುಲಾಮ ನಾನು
ನಿನ್ನ ಗುಲಾಮ ನಾನು

ಉಳಿದವರು ಕಂಡಂತೆ

Image

ನಾನು , ನನ್ನದೆನ್ನುವಾಗ
ನಾನಾಗುವನೇ ಮೃಗದಂತೆ ?
ನನ್ನ ಬಗ್ಗೆ ನಾನೇನೆ ಹೇಳಿದರೂ
ನಾನು ನಾನಾಗುವನೆನು?
ನಾನಲ್ಲವೇ ಉಳಿದವರು ಕಂಡಂತೆ !?

ಹೆಸರು ನನ್ನದೇ ?
ಉಸಿರು ನನ್ನದೇ?
ಈ ದೇಹ ನನ್ನದೇ ?
ಈ ಜೀವ ನನ್ನದೇ ?
ಯಾವದು ನನ್ನದೆನ್ನುವಾಗ
ಯಾವುದೋ ಮಾಯೇಯೋಳು
ನಾ ಸೇರಿದಂತೆ

ಬೇಡುವ ಕೈಗಳು

Image

ಹಸಿವಿನ ಬೇನೆಗೆ ಕರುಳು ಸುಡುವಾಗ

ಬೇಡುವ ಕೈಗಳು ನಡಗುವಾಗ

ಎರಡೂ ಕಣ್ಣಿಂದ ಕಣ್ಣೀರು ಹರಿಯುವಾಗ

ಉಸಿರಾಡುವ ಗಾಳಿಗೂ ನಾ ಬೇಡವಾದಾಗ

ದೇವರೇ ,ನಾನೇಗೆ ನಿನ್ನ ಜಪಿಸಲಿ

ಗರ್ಭಗುಡಿಯಲಿ  ನಿನ್ನ ಪೂಜೆಯಲಿ

ನೂರಾರು ನಾಣ್ಯ, ನಿನ್ನ ಆರುತಿ ತಟ್ಟೆಯಲಿ

ಚಳಿಯರಲಿ,ಸುಡುವ ಬಿಸಿಲಿರಲಿ

ನನ್ನ ಮುಖವೇ ಕಾಣುವುದು ನನ್ನ ಖಾಲಿ ತಟ್ಟೆಯಲಿ

ದೇವರೇ , ನೀನಿರುವುದು ನಾನೇಗೆ ನಂಬಲಿ

ಕೊನೆಗಳಿಗೆಯಲ್ಲೂ ಸಿಗಬಾರದೇ ಅಂಬಲಿ

ಸಾಯುವವರೆಗೆ ನಾನೇಗೆ ಬದುಕಲಿ

ನಾ ಬದಕಿದ್ದು ಸತ್ತಂತೆ ಈ ಜಗದಲಿ

ದೇವರೇ, ನಾನೆಂದು ನಿನ್ನ ಸೇರಲಿ ..?

#ಚಿತ್ರಕೃಪೆ :Google

ಕಡಲ ಅಲೆಗಳು

Image

ಕಡಲ ಅಲೆಗಳು ಒಂದಾಗಿ

ಕಡಲ ದಡವ ತಲುಪಿದಾಗ

ಮುಕ್ತ ಭಾವ ಆ ಅಲೆಗಳಿಗೆ …

ಕಡಲ ದಡದಿ ವಿಶ್ರಮಿಸಿ

ಹಿಂದ್ತಿರುಗಿ ನೋಡುವ ಗಳಿಗೆ

ಮತ್ತೇ ಸೇರುವುದೇ ಅವು

ಕಡಲ ಒಡಲೊಳಗೆ ..?

#ಚಿತ್ರಕೃಪೆ :Google