
ನಾ ಕಂಡಂತೆ


‘ನಂಬಿಕೆ’ ರಹಿತ ಇರದು ಪ್ರೀತಿ ಶಾಶ್ವತ

ದೈತ್ಯ ಅಲೆಗಳಿಗೆ ಎದೆ ಒಡ್ಡಿ ಮುಂದೆ ಸಾಗುವ ‘ಹಡಗು’

ಧ್ಯಾನ!
ಕಡಲ ಧ್ಯಾನ
ಹೃದಯದ ಮೌನ
ಮೂಡಿಬರುತಿದೆ ಕವನ..
ಅಲೆಗಳ ಸೆಳೆತ
ಹೃದಯದ ಬಡಿತ
ಹೇಳುವುದೇ ಸಾಂತ್ವಾನ ?
ಅಲೆಗಳು ಬಂದು
ಕಾಲು ತಟ್ಟುವಾಗ
ಮನ ಮುಟ್ಟಿದಂತೆ ಭಾವ..
ಎಷ್ಟೇ ದುಃಖವಿರಲಿ ಎದೆಯೊಳಗೆ
ಕಡಲ ಮುಂದೆ ನಿಂತರೆ
ಹಗುರಾಗುವುದು ಜೀವ..