bhaavashardhi

ಕಹಳೆ ಅರ್ಪಿಸುವ ರಾಜ್ಯ ಮಟ್ಟದ ಕಥೆ ಸ್ಪರ್ಧೆ

**ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು**
ಕಣ್ಣಾರೆ ಕಂಡಿದ್ದೋ , ಕಲ್ಪನೆಯಲ್ಲಿ ಕನವರಿಸಿದ್ದೋ , ವಿಧಿಯನ್ನು ಕಾಲದ ಕಟಕಟೆಯಲ್ಲಿ ನಿಲ್ಲಿಸಿ ಸರಿ ತಪ್ಪುಗಳ ವಿಮರ್ಶಿಸಿದ್ದೋ ಎಲ್ಲವನ್ನೂ ಅಕ್ಷರಕ್ಕಿಳಿಸಿ..! “ಕಹಳೆ” ಯ ಕಥಾಸ್ಪರ್ಧೆ” ಯಲ್ಲಿ ಭಾಗವಹಿಸಿರಿ!
ಸ್ಪರ್ಧೆಯ ನಿಯಮಗಳು :
೧. ಹರಿಯುವ ಅಕ್ಷರದ ಹೊಳೆಗೆ ತಡೆಯೇಕೆ ?ಕಥೆಗೆ ಪದಗಳ ಮಿತಿಯಿಲ್ಲ.
೨. ಒಬ್ಬರು ಎಷ್ಟು ಕಥೆಗಳನ್ನು ಬೇಕಾದರೂ ಕಳುಹಿಸಬಹುದು.
೩. ನಿಮ್ಮ ಕಥೆಗಳನ್ನು “ಕಹಳೆ” ಫೇಸ್ಬುಕ್ ಪುಟದಲ್ಲಿ ,ನಮ್ಮ ಕರ್ನಾಟಕ ಮಿಮ್ಸ್ ಹಾಗೂ ಇರುವೆ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಲಾಗುವುದು.
೪. ನಾಡಿನ ಪ್ರಖ್ಯಾತ ಬರಹಗಾರರಿಂದ ವಿಜೇತರನ್ನು ಆಯ್ಕೆ ಮಾಡಲಾಗುವುದು.
೫. ವಿಜೇತರಿಗೆ ಸಾವನ್ನ ಪಬ್ಲಿಕೇಶನ್ ರವರಿಂದ ಪುಸ್ತಕಗಳು, ಇರುವೆ ತಂಡದಿಂದ ಗಿಫ್ಟ್ ಕೂಪನ್ಸ್ ಹಾಗೂ ನಮ್ಮ ಕರ್ನಾಟಕ ಮಿಮ್ಸ್ ಅವರಿಂದ ಕೂಡ ಬಹುಮಾನಗಳು ಕಾದಿವೆ!.
೬. ಸ್ಪರ್ಧೆಯ ಕುರಿತ ಎಲ್ಲಾ ವಿಷಯಗಳಲ್ಲಿ ಕಹಳೆಯ ನಿರ್ಣಯವೇ ಅಂತಿಮ ನಿರ್ಣಯ.
ನಿಮ್ಮ ಕಥೆಗಳನ್ನು ನುಡಿ ಇಲ್ಲವೇ ಯೂನಿಕೋಡ್’ನಲ್ಲಿ ಟೈಪ್ ಮಾಡಿ hello@kahaLe.org ಗೆ ಇಮೇಲ್ ಮಾಡಿ.
***ನಿಮ್ಮ ಕಥೆಗಳು ನಮಗೆ ತಲುಪಲು ಏಪ್ರಿಲ್ 10th , 2017 ಕೊನೆಯ ದಿನಾಂಕವಾಗಿರುತ್ತದೆ.***
ಸ್ಪರ್ಧೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಫಾಲೋ ಮಾಡಿ
https://www.facebook.com/Kahale.org/
https://www.instagram.com/kahale_org/
www.kahale.org

ಐಟಿತಜ್ಞ -೬

ಐಟಿತಜ್ಞ -೩

ಬದುಕಿನ ಮೇಲಿನ ಅಸ್ಪಷ್ಟತೆ …

ಬದುಕಿನ ಮೇಲಿನ ಅಸ್ಪಷ್ಟತೆ
ಮನದ ಕಾರ್ಮುಗಿಲಿನ ಹಾಗೆ ದಟ್ಟವಾಗಿದೆ.
ಎಲ್ಲ ಉತ್ತರವೂ ಪ್ರಶ್ನೆಯಾಗೇ ಕಾಣುತ್ತಿದೆ, ಕಾಡುತ್ತಿದೆ
ಯಾರಿಗೂ ಹೇಳದ ಅಸಹಾಯಕತೆ
ಹೇಳಿಕೊಂಡರೂ ಮುಗಿಯದ ವ್ಯಥೆ
ಅರ್ಥವಿಲ್ಲದ, ಅಸಂಬಂಧ ಯೋಚನೆಗಳ
ಘರ್ಷಣೆ ಮನದೊಳಗೆ..
ಹುಡುಕಿದರೂ ಸಿಗದಾಗೆ
ಹುದುಗಿಹೋಗಿದೆ ಧೈರ್ಯ ನನ್ನೊಳಗೆ..
ಎಲ್ಲ ಸ್ನೇಹಿತರಿದ್ದಾರೆ, ಆದರೆ
ಸ್ನೇಹ ಗಟ್ಟಿಯಾಗಿ ಉಳಿದಿಲ್ಲ
ಎಲ್ಲ ಸಂಬಂಧಿಕರಿದ್ದಾರೆ, ಆದರೆ
ಸಂಬಂಧಗಳ ಬೇರು ಆಳವಾಗಿಲ್ಲ

ಈ ಬೆತ್ತಲೆ , ಕತ್ತಲೆ ಬದುಕಿಗೆ
ಬೆಳಕಿನ ವೇಷದ ಹಂಗು ಯಾಕೆ ?
ಸಾಯೋವರೆಗೆ ಈ ಬದಕನ್ನು
ಸಾಯಿಸುತ್ತಲೇ ಬದುಕಬೇಕೇ ?

ಐಟಿಲೈಫ್ – ೧

ಹಳೇ ಕವನಕ್ಕೆ ಹೊಸ ರೂಪ!

 

 

ಧನ್ಯವೋ ಈ ಜೀವನ !

ಸಂಭ್ರಮವೋ ಈ ಪಯಣ
ಧನ್ಯವೋ ಈ ಜೀವನ !

ಎಲ್ಲೋ ಹುಟ್ಟಿ ಎಲ್ಲೆಲ್ಲೊ ಹರಿದು
ಕೌತಕ ಕವನಕೆ ಸಾಲೊಂದ ಬರೆದು
ಸೇರಿವೆ ಕಡಲನು ನದಿಗಳ ಸಾಲು
ಅಲ್ಲೂ ಇದೆ ಅನ್ಯೋನ್ಯದ ಬಾಳು !

ಸಂಭ್ರಮವೋ ಈ ಪಯಣ
ಧನ್ಯವೋ ಈ ನಯನ

ನಗುತಿದೆ ನೋಡ ನೀಲಿ ಬಾನು
ಅಳುತಿದೆ ಮೋಡ ಕಾರಣವೇನು?
ಸುರಿವ ಮಳೆಗೆ ಕರಗಿಬಿಡಲೇನು
ನಾನು ಒಮ್ಮೆ ನದಿಯಾಗಬಿಡಲೇನು

ಸಂಭ್ರಮವೋ ಈ ಪಯಣ
ಧನ್ಯವೋ ನಾನೀದಿನ
ಅಲೆಗಳು- ಕಡಲುತೊಟ್ಟ ಬಳೆಗಳು
ಗುಟ್ಟುಬಿಟ್ಟು ಕೊಡದ ಕಾಡುಗಳು
ಗೂಡು ಬಿಟ್ಟು ಬಂದ ಹಕ್ಕಿಗಳು
ಎಣಿಸಿದರೂ ಕಮ್ಮಿಯಾಗದ ಚುಕ್ಕಿಗಳು

ಸಂಭ್ರಮವೋ ಈ ಪಯಣ
ಧನ್ಯವೋ ನಾನೀದಿನ
ಧನ್ಯವೋ ಈ ಜೀವನ !

ಅವಳು

ಅವಳೊಂದು ಸುಂದರ ಸುಳ್ಳು…

ಅವಳೊಂದು ಸುಂದರ ಸುಳ್ಳು
ನನ್ನೆದೆಯ ಚುಚ್ಚುವ ಮುಳ್ಳು
ನಾನು ಸೋತಾಗ ನಕ್ಕು
ಗೆದ್ದಾಗ ನನ್ನ ಬಿಟ್ಟು ಹೋದವಳು..

ನನ್ನ ಏಕಾಂತಕ್ಕೆ
ವೈರಾಗ್ಯ ಕೊಡಿಸಿ
ನನ್ನ ಏಕಾಂಗಿ ಮಾಡಿ
ಮೊತ್ತೊಬ್ಬರ ಪ್ರೇಮಾಂಗಿಯಾದವಳು

ಬಾಳದಾರಿಯಲಿ ಅಕಸ್ಮಾತ್ ಸಿಕ್ಕು
ನನ್ನೊಂದಿಗೆ ನಾಲ್ಕು ಹೆಜ್ಜೆ ಹಾಕಿ
ದಾರಿ ತಪ್ಪಿಸಿ ಮರೆಯಾದವಳು..

ಕತ್ತಲೆಯ ಬಾಳಿನಲಿ
ಹಣತೆ ಹಿಡಿದು ಬಂದು
ಬೆಳಕಿನ ಆಸೆ ಹುಟ್ಟಿಸಿ
ಹಣತೆಯನ್ನು ಅವಳೇ ಆರಿಸಿ
ನನ್ನ ಬದುಕಿಗೆ ಕತ್ತಲಾದವಳು..

ಅವಳನ್ನು ಮತ್ತೆ ಪ್ರೀತಿಸಿವುದು
ಅಮಾವಾಸ್ಯೆ ರಾತ್ರಿಯಲಿ
ಚಂದಿರ ಕಾಣಲು ನಿಂತಂತೆ
ನೀರಿರದ ಬಾವಿಯಲ್ಲಿ
ಪ್ರತಿಬಿಂಬ ನೋಡಲು ಕೂತಂತೆ
ಸಮುದ್ರದ ಮಧ್ಯದೊಳಗೆ
ತೀರವ ಹುಡುಕಿದಂತೆ
ಶಾಯಿಯಿರದ ಲೇಖನಿಯಲ್ಲಿ
ಕವನ ಬರೆದಂತೆ.!

ಸರಳ ಸಾಲುಗಳು – ೮

೧.

ಕಥೆಯಾದರೂ ವ್ಯಥೆಯಾಗಿಯಾದರು
ಬಂದು ಸೇರು ನನ್ನ ಹೃದಯ ಪುಟದೊಳಗೆ
ನನ್ನ ಉಸಿರನ್ನೇ ತುಂಬುವೆ
ಪ್ರತಿ ಪುಟದ ಸಾಲಿನೊಳಗೆ
ನಿನಗೆ ನಾ ಬರೆದ ಪದಗಳೇ
ನನ್ನ ಕಣ್ಣೀರ ಸಂತ್ಯೆಸಿವೆ…

೨.
ನಾ ಬರೆದ ಕವನದ ಸಾಲುಗಳಲ್ಲಿ
ಹೃದಯದ ನೋವಿದೆ
ಮೊದಲ ಪ್ರೀತಿಯ ಸಾವಿದೆ

೩.
ಹೃದಯ ಕಾರಾಗೃಹದಲ್ಲಿ
ಬಂಧನವಾಗಿದ್ದ ಮಾತುಗಳು
ಕಣ್ಣೀರಾಗಿ ಬಿಡುಗಡೆ ಹೊಂದಿವೆ
೪.
ಸಾವಿರ ಮಾತಿದ್ದರೂ
ಮೌನ ಮಾತಾಯಿತು
ಈ ಘಳಿಗೆ ..
ಪದಗಳಿಗೆ ಹದವಿದ್ದರೂ
ಮಾತು ಮೌನವಾಯಿತು
ಎದೆಯೊಳಗೆ..