kannada book reviews

20000+ views!

A big thank you to all my readers for this small milestone 🙂

Keep reading! Keep blogging!!

 

ದೇವರ ಹುಚ್ಚು

‘ದೇವರ ಹುಚ್ಚು’ ಜೋಗಿ ಅವರು ಬರೆದ ಕಾದಂಬರಿ
ಇಲ್ಲಿ ರಂಗನಾಥ ಮತ್ತು ರಾಜಶೇಖರ ಎಂಬ ಹೆಸರಿನ ಮುಖ್ಯ ಪಾತ್ರಗಳು. ರಂಗನಾಥ ಅಪ್ಪಟ ಬ್ರಾಹ್ಮಣನ ಮಗ.
ರಾಜಶೇಖರ ಕ್ಷೌರಿಕನ ಮಗ. ಅವರಿಬ್ಬರ ಮನೆ ಅಕ್ಕ ಪಕ್ಕದಲ್ಲೇ ಇದ್ದುದರಿಂದಲೇ ಸಹಜವಾಗಿಯೇ ಅವರಿಬ್ಬರೂ ಒಳ್ಳೆಯ ಸ್ನೇಹಿತರು. ಆದರೆ ವಿಚಾರಧಾರೆಯಲ್ಲಿ ಅವರಿಬ್ಬರ ನಡುವೆ ತುಂಬಾ ಅಂತರವಿತ್ತು .
ರಂಗನಾಥ ತಾನೊಬ್ಬ ಬ್ರಾಹ್ಮಣವಾಗಿದ್ದರೂ ಧರ್ಮದ ಪರಿಪಾಲನೆ, ದೇವರ ಇರುವಿಕೆಯ ಬಗ್ಗೆ ಸದಾ ತರ್ಕವೆತ್ತುತ್ತಿದ್ದ.
ದೇವರು ನಿಜವಾಗಲು ಇರುವನೇ ? ನಮ್ಮ ಬದುಕಿನ ಮೇಲೆ ನಿಯಂತ್ರವಿರುವ ಒಂದು ಶಕ್ತಿ ಇದೆಯೇ ? ನಿಜವಾಗಲು ಇಲ್ಲ ಎಂಬುದು ಅವನ ವಾದ. ಮನುಷ್ಯ ಸಂಬಂಧಗಳೇ ಸುಳ್ಳು ಎಂದು ಧಿಕ್ಕರಿಸಿವಷ್ಟು ಬಂಡ ಬ್ರಾಹ್ಮಣ ರಂಗನಾಥ.ಇವನ ಹುಚ್ಚು ತರ್ಕಗಳಿಗೆ ಒಮ್ಮೆಮ್ಮೆ ಮೌನದಿ ಸಮ್ಮತಿಸುತ್ತಿದ್ದ ಕೆಲುವೊಮ್ಮೆ ಅವನಿಗೆ ಸವಾಲೆಗೆದು ವಾದ ಮಾಡಲಾಗದೇ ವಿಫಲನಾಗುತ್ತಿದ್ದ ರಾಜಶೇಖರ.

ರಂಗನಾಥ ಸಾವನಪ್ಪುತ್ತಾನೆ. ಅದು ಆತ್ಮಹತ್ಯೆಯೋ ? ಅಥವಾ ಕೊಲೆಯೋ ? ಎಂದು ತನಿಖೆ ಮಾಡುವುದು ಪೋಲಿಸ್ ಅಧಿಕಾರಿಯಾದ ಅವನ ಸ್ನೇಹಿತ ರಾಜಶೇಖರ.
ಮುಂದೇನಾಯ್ತು ? ಪುಸ್ತಕ ಓದಿ 🙂

https://sapnaonline.com/devara-hucchu-jogi-ankita-pustaka-883142

ಕರುಣಾಳು ಬಾ ಬೆಳಕೆ

ಪುಸ್ತಕ : ಕರುಣಾಳು ಬಾ ಬೆಳಕೆ
ಲೇಖಕರು : ಗುರುರಾಜ ಕರಜಗಿ
ಪುಟಗಳು :೨೦೦
ಬೆಲೆ : ೧೨೫

ಡಾ .ಗುರುರಾಜ ಕರಜಗಿ ಅವರ ‘ಕರುಣಾಳು ಬಾ ಬೆಳಕೆ ‘ಹೊತ್ತಿಗೆಯು ನೂರು ಬೆಳಕಿನ ಕಥೆಗಳನ್ನು ಹೊತ್ತು ನಮ್ಮ ಮನದ ಅಂಧಕಾರವನ್ನು ನಂದಿಸುತ್ತದೆ. ಇಲ್ಲಿ ಬರುವ ಪ್ರತಿ ಕಥೆಯು ಮಾನವೀಯ ಮೌಲ್ಯಗಳನ್ನು ಮನ ಮುಟ್ಟುವಂತೆ ಹೆಣೆಯಲಾಗಿದೆ.ಚಿಕ್ಕ ಕಥೆಗಳಿದ್ದರೂ ಚೊಕ್ಕವಾಗಿ ನೀತಿ ಪಾಠವನ್ನು ಓದುಗರಿಗೆ ತಲುಪಿಸಲು ಲೇಖಕರು ಸಫಲರಾಗಿದ್ದಾರೆ.

ಇಲ್ಲಿ ಪ್ರಸ್ತುತವಾಗಿರುವ ಕಥೆಗಳು ಲೇಖಕರ ಅನುಭವದಿಂದ ,ಅನುಭಾವಿಗಳಿಂದ,ಅನುವಾದದಿಂದ ಬಂದಿದೆ.
ಪ್ರಜಾವಾಣಿಯಲ್ಲಿ ಬರುತಿರುವ ಇವರ ಲೇಖನಗಳು ಜನರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೇ ಹಲವಾರು ಜೀವನದಲ್ಲಿ ಇವರ ಕಥೆಗಳು ಪ್ರಭಾವಬೀರಿದೆ. ಇಲ್ಲಿರುವ ಕಥೆಗಳು ಬರೀ ಕಥೆಗಳಾಗದೇ ಕೃತಿಗಳಾಗಿವೆ ಅಲ್ಲದೆ ಓದುಗರ ಚಿಂತನೆಗೆ ,ಕನಸುಗಳಿಗೆ ದಾರಿದೀಪವಾಗಿದೆ

‘ಕರುಣಾಳು ಬಾ ಬೆಳಕೆ’ಒಟ್ಟು ಐದು ಭಾಗಗಳಲ್ಲಿ  ಹೊರಬಂದಿವೆ. ನಾನೀಗ ಭಾಗ-೧ ಮುಗಿಸಿದ್ದೇನೆ. ನೀವೂ ಓದಿ ಹೊಸ ಬೆಳಕನ್ನು ನಿಮ್ಮ ಮನದಮನೆಗೆ ಆಹ್ವಾನಿಸಿ !

https://sapnaonline.com/shop/Author/gururaj-karajagi

ಅಮ್ಮ ಹೇಳಿದ ಎಂಟು ಸುಳ್ಳುಗಳು |ಭಾವತೀರಯಾನ

ಪುಸ್ತಕ : ಅಮ್ಮ ಹೇಳಿದ ಎಂಟು ಸುಳ್ಳುಗಳು
ಲೇಖಕರು : ಎ. ಆರ್. ಮಣಿಕಾಂತ್
ಬೆಲೆ : ೧೨೦

ಪುಸ್ತಕ : ಭಾವತೀರಯಾನ
ಲೇಖಕರು : ಎ. ಆರ್. ಮಣಿಕಾಂತ್
ಪುಟಗಳು : ೧೬೪
ಬೆಲೆ : ೧೨೦

ಎ. ಆರ್. ಮಣಿಕಾಂತ್ ಅವರು ಬರೆದ ಈ ಎರಡೂ ಪುಸ್ತಕಗಳಲ್ಲಿ ಅದೆಷ್ಟೂ ಯಶೋಗಾಥೆಗಳಿವೆ. ಇಲ್ಲಿ ಮೂಡಿಬರುವ ಪ್ರತಿ ಕಥೆಯೂ ಮಲಗಿದ್ದ ನಮ್ಮ ಕನಸುಗಳನ್ನು ಬದಿದಬ್ಬಿಸುತ್ತವೆ. ಎಲ್ಲವೂ ಇದ್ದು ನಾವು ನಮ್ಮ ಗುರಿ ತಲುಪಲು ಎಡವುತ್ತೇವೆ ಇಲ್ಲವೇ ‘ನಮಗೆ ಅದೃಷ್ಟವಿಲ್ಲ’ ಎಂಬ ನೆಪ ಹೇಳಿ ನಮ್ಮ ಗುರಿಗಳನ್ನು ಗಾಳಿಗೆ ತೋರುತ್ತೇವೆ. ಆದರೆ ಇವೆರಡು ಪುಸ್ತಕಗಳಲ್ಲಿ ಬರುವ ಎಲ್ಲ ಕಥಾನಾಯಕ/ಕಥಾನಾಯಕಿ ಅನುಭವಿಸಿದ ಪಾಡು ಅಷ್ಟಿಷ್ಟಲ್ಲ.

ಊಟಕ್ಕೂ ಪರೆದಾಡಿದವರಿಂದ ಹಿಡಿದು ಬದುಕೋಕೆ ಸೂರಿಲ್ಲದೆ ಅಲೆಮಾರಿ ಜೀವನ ಸಾಗಿಸಿ ಇಂದು ಬದುಕಿನ ಉತ್ತುಂಗದ ಸ್ಥಾನ ತಲುಪಿದ್ದವರ ಮನ ಮುಟ್ಟುವ ಕಥೆ ಇದೆ .ಒಬ್ಬ ಸಾಧಾರಣ ಮನುಷ್ಯ ಯಾವ ಗಾಡ್ ಫಾದರ್ ಇಲ್ಲದೇ ಬರೀ ತನ್ನ ಪರಿಶ್ರಮದದಿಂದ ಸಮಾಜದಲ್ಲಿ ತನ್ನದೇ ಆದ ಒಂದು ಛಾಪು ಮೂಡಿಸಬಹುದು ಎಂದು ತೋರಿಸಿಕೊಟ್ಟವರ ಚರಿತ್ರೆವಿದೆ .

ಇಲ್ಲಿ ಬರುವ ಹಲವಾರು ಕಥೆಗಳನ್ನು ನೀವಿಗಾಗಲೇ ಸಾಮಾಜಿಕ ತಾಣಗಳಲ್ಲಿ ನೋಡಿರಬಹುದು ಅಥವಾ ಕೇಳಿರಬಹುದು. ಆದರೆ ಮಣಿಕಾಂತ್ ಅವರು ಪ್ರಸ್ತುತ ಪಡಿಸಿದ ರೀತಿ ಎಂಥಹ ಕಲ್ಲು ಹೃದಯವನ್ನು ಕೂಡ ಕರಗಿಸುತ್ತದೆ. ಇಲ್ಲಿ ಬರುವ ಹಲವು ಕಥೆಗಳು ನಮ್ಮನ್ನು ಘಾಡವಾದ ಚಿಂತನೆಗೆ ಹಚ್ಚುತ್ತವೆ. ಮಾನವಿಯತೆ ಮೆರೆಯುವ ಕಥೆಗಳ ಜೊತೆಗೆ ಸಾಮಾಜಿಕ ಕಳಕಳಿವಿರುವ ಕಥೆಗಳು ಇಲ್ಲಿ ಬಂದು ಹೋಗುತ್ತವೆ.

ಅಂಗವೈಫಲ್ಯ ,ಕಡುಬಡತನ,ಶೋಷಣೆ, ಅಲೆಮಾರಿ ಜೀವನ , ಸೋಲುಗಳ ಸರಮಾಲೆ,ನಂಬಿಕೆದ್ರೋಹ ಹೀಗೆ ಇಂತಹ ಅನೇಕ ಜಟಿಲ ಕಷ್ಟಗಳಿಗೆ ಎದೆಯೊಡ್ಡಿ ಜೀವನ ಸಾಗಿಸಿದವರ ಕಥೆ ಆಲಿಸಿದಾಗ ಕಣ್ಣಂಚಿನಲಿ ಹನಿ ಜಿನುಗದೆ ಇರದು.. ಅಂತಹ ಕಡುಕಷ್ಟ ಎದುರಿಸಿ, ಯಾವ ಸಮಾಜ ತಮ್ಮನ್ನು ಹಗುರವಾಗಿ ಕಂಡಿತ್ತೋ ಅದೇ ಸಮಾಜ ಇಂದು ಅವರಿಗೆ ಸಲಾಂ ಹೊಡೆಯುವಹಾಗೆ ಬದುಕಿದವರಿಗೆ ಹಾಗೂ ಅಂತಹ ಯಶೋಗಾಥೆಗಳನ್ನು ನಮಗೆ ಪರಿಚಯಿಸಿದ
ಎ. ಆರ್. ಮಣಿಕಾಂತ್ ಅವರಿಗೆ ನನ್ನದೊಂದು ದೊಡ್ಡ ಸಲಾಂ!

ನೀವೂ ಇವೆರಡು ಪುಸ್ತಕಗಳನ್ನು ಓದಿ..

https://sapnaonline.com/baavatirayana-ar-manikanth-neelima-prakashana-12929192

https://sapnaonline.com/amma-helida-entu-sullugalu-ar-manikanth-neelima-prakashana-4858345