ಬದುಕಿನ ಮೇಲಿನ ಅಸ್ಪಷ್ಟತೆ
ಮನದ ಕಾರ್ಮುಗಿಲಿನ ಹಾಗೆ ದಟ್ಟವಾಗಿದೆ.
ಎಲ್ಲ ಉತ್ತರವೂ ಪ್ರಶ್ನೆಯಾಗೇ ಕಾಣುತ್ತಿದೆ, ಕಾಡುತ್ತಿದೆ
ಯಾರಿಗೂ ಹೇಳದ ಅಸಹಾಯಕತೆ
ಹೇಳಿಕೊಂಡರೂ ಮುಗಿಯದ ವ್ಯಥೆ
ಅರ್ಥವಿಲ್ಲದ, ಅಸಂಬಂಧ ಯೋಚನೆಗಳ
ಘರ್ಷಣೆ ಮನದೊಳಗೆ..
ಹುಡುಕಿದರೂ ಸಿಗದಾಗೆ
ಹುದುಗಿಹೋಗಿದೆ ಧೈರ್ಯ ನನ್ನೊಳಗೆ..
ಎಲ್ಲ ಸ್ನೇಹಿತರಿದ್ದಾರೆ, ಆದರೆ
ಸ್ನೇಹ ಗಟ್ಟಿಯಾಗಿ ಉಳಿದಿಲ್ಲ
ಎಲ್ಲ ಸಂಬಂಧಿಕರಿದ್ದಾರೆ, ಆದರೆ
ಸಂಬಂಧಗಳ ಬೇರು ಆಳವಾಗಿಲ್ಲ
ಈ ಬೆತ್ತಲೆ , ಕತ್ತಲೆ ಬದುಕಿಗೆ
ಬೆಳಕಿನ ವೇಷದ ಹಂಗು ಯಾಕೆ ?
ಸಾಯೋವರೆಗೆ ಈ ಬದಕನ್ನು
ಸಾಯಿಸುತ್ತಲೇ ಬದುಕಬೇಕೇ ?